ನ್ಯೂಯಾರ್ಕ್: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಹಣಕಾಸು ಸಂಸ್ಥೆಗಳೊಂದಿಗೆ, ಮಾಧ್ಯಮ ದಿಗ್ಗಜರೊಂದಿಗೆ, ವಿವಿಧ ಕಂಪನಿಗಳ 500 ಸಿಇಓಗಳೊಂದಿಗೆ ರೌಂಡ್ ಮೇಬಲ್ ಸಭೆ ನಡೆಸಿದರು.
ಜೆಪಿ ಮೋರ್ಗನ್ ಮತ್ತು ಬ್ಲ್ಯಾಕ್ ಸ್ಟೋನ್ ಹಣಕಾಸು ಸಂಸ್ಥೆ ಮತ್ತು ರೂಪರ್ಟ್ ಮರ್ಡೋಚ್ ಮೀಡಿಯಾ ಹೌಸ್ಗಳೂ ಈ ಸಭೆಯಲ್ಲಿ ಪಾಲ್ಗೊಂಡಿದ್ದವು.
ಈ ಸಂದರ್ಭ ಮಾತನಾಡಿದ ಮೋದಿ, ಜಾಗತಿಕ ಮಟ್ಟದಲ್ಲಿ ವಿದೇಶಿ ನೇರ ಬಂಡವಾಳದ ಪ್ರಮಾಣದಲ್ಲಿ ಕುಸಿತ ಕಂಡರೂ ಭಾರತದಲ್ಲಿ ಇದು ಶೇ.40ರಷ್ಟು ಏರಿಕೆ ಕಂಡಿದೆ ಎಂದರು. ಅಲ್ಲದೇ ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ವಿಸ್ತೃತ ಮಾಹಿತಿಯನ್ನು ನನಗೆ ನೀಡಿ ಎಂದು ಸಿಇಓಗಳಿಗೆ ತಿಳಿಸಿದರು.
ಆಡಳಿತದಲ್ಲಿ ಸುಧಾರಣೆ ನನ್ನ ಪ್ರಮುಖ ಆದ್ಯತೆ. ಸರಳ ಪ್ರಕ್ರಿಯೆ, ಶೀಘ್ರ ನಿರ್ಧಾರಕೈಗೊಳ್ಳುವಿಕೆ, ಪಾರದರ್ಶಕತೆ, ಹೊಣೆಗಾರಿಕೆ ನಮ್ಮ ಮುಖ್ಯ ಉದ್ದೇಶ ಎಂದರು.
ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಗೆ ಬೇಕಾದ ಎಲ್ಲಾ ಕಾರ್ಯಾವನ್ನು ಭಾರತ ಮಾಡಲಿದೆ ಎಂದು ಅವರು ಮಾಧ್ಯಮ ದಿಗ್ಗಜರಿಗೆ ಭರವಸೆ ನೀಡಿದರು.
ಭಾರತ ನಿಮ್ಮನ್ನು ಎರಡೂ ಕೈಗಳಿಂದ ಬರಮಾಡಿಕೊಳ್ಳಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಬಂದು ಹೂಡಿಕೆ ಮಾಡಲು ಇದು ಸರಿಯಾದ ಸಮಯ ಎಂದು ಅವರು ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.