ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಬಿಲಿಯನೇರ್ ಹೂಡಿಕೆದಾರ ಮತ್ತು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಜಾರ್ಜ್ ಸೋರೊಸ್ ಒಡೆತನದ ಸಂಘಟನೆಯ ಸದಸ್ಯೆ ಸುನಿತಾ ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದನ್ನು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇರಾನಿ, ರಾಹುಲ್ ಗಾಂಧಿ ಅವರು ಜಾರ್ಜ್ ಸೊರೊಸ್ನಿಂದ ಹಣ ಪಡೆದಿರುವವರ ಜೊತೆ ಏಕೆ ಸ್ನೇಹ ಮಾಡುತ್ತಿದ್ದಾರೆ? ಸೊರೊಸ್ ಏನು ಮಾಡಲು ಬಯಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇರಾನಿ ಮಾಧ್ಯಮದ ಮುಂದೆ ರಾಹುಲ್ ಗಾಂಧಿ ವಿಶ್ವನಾಥ್ ಅವರೊಂದಿಗೆ ಕುಳಿತಿರುವ ಫೋಟೋವನ್ನು ಸಹ ಪ್ರದರ್ಶಿಸಿದ್ದಾರೆ.
ರಾಹುಲ್ ಗಾಂಧಿಯವರ ನ್ಯೂಯಾರ್ಕ್ ಪ್ರವಾಸವನ್ನು ಇಸ್ಲಾಮಿಕ್ ಸರ್ಕಲ್ ಆಫ್ ನಾರ್ತ್ ಅಮೇರಿಕಾ (ICNA) ನ ಯೋಜನಾ ನಿರ್ದೇಶಕ ತಂಝೀಮ್ ಅನ್ಸಾರಿ ಆಯೋಜಿಸಿದ್ದಾರೆ ಎಂದು ಇರಾನಿ ಹೇಳಿದ್ದಾರೆ, ಐಸಿಎನ್ಎ ಜಮಾತ್-ಎ-ಇಸ್ಲಾಂ-ಎರಡೂ ಕಠಿಣ ಇಸ್ಲಾಮಿಸ್ಟ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿದ್ದಾರೆ.
“ಕರ್ನಾಟಕದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿಯೂ ಸಹ, ಜಾರ್ಜ್ ಸೊರೊಸ್ ಅವರ ಅನುದಾನದಲ್ಲಿ ನಡೆಯುತ್ತಿರುವ ಓಪನ್ ಸೊಸೈಟಿ ಫೌಂಡೇಶನ್ನ ಜಾಗತಿಕ ಉಪಾಧ್ಯಕ್ಷರು ರಾಹುಲ್ ಗಾಂಧಿಯವರೊಂದಿಗೆ ಕಾಣಿಸಿಕೊಂಡಿದ್ದರು. ಅತ್ಯಂತ ದುಃಖಕರ ಸಂಗತಿಯೆಂದರೆ ಇಸ್ಲಾಮಿಕ್ ಸರ್ಕಲ್ ಆಫ್ ನಾರ್ತ್ ಅಮೆರಿಕದೊಂದಿಗಿನ ಅವರ ಸಂಪರ್ಕ. ಸಾರ್ವಜನಿಕ ಡೊಮೇನ್ನಲ್ಲಿರುವವರು ನ್ಯೂಯಾರ್ಕ್ನಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸಂವಾದ ನಡೆಸಲು ನೋಂದಣಿ ಪಡೆಯಬೇಕಾದರೆ ತಜೀಮ್ ಅನ್ಸಾರಿ ಎಂಬ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಹೊಂದಬೇಕಾಗುತ್ತದೆ. ಈತ ಜಮಾತ್-ಎ-ಇಸ್ಲಾಮಿಯೊಂದಿಗೆ ಸಾಂಸ್ಥಿಕ ಸಂಬಂಧವನ್ನು ಹೊಂದಿದ್ದಾರೆ.
#WATCH | Union Minister Smriti Irani says, "…The question that has been left unanswered by the Congress party is – Is it true that Rahul Gandhi met Sunita Vishwanath during his trip to the US?…When it is clear to every Indian what George Soros intends to do, why is Rahul… pic.twitter.com/GhWoCjkTBS
— ANI (@ANI) June 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.