ನವದೆಹಲಿ: ಭಾರತೀಯ ಅಮೆರಿಕನ್ನರು ಅಮೆರಿಕದ ಮೇಲೆ ಜೀವನದ ಪ್ರತಿಯೊಂದು ಅಂಶದಲ್ಲೂ ಬೀರಿದ ಅಸಾಧಾರಣ ಪ್ರಭಾವದಿಂದ ನಾನು ಆಶ್ಚರ್ಯಚಕಿತಗೊಂಡಿದ್ದೇನೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಹೇಳಿದ್ದಾರೆ.
“ಜೀವನದ ಪ್ರತಿಯೊಂದು ಅಂಶದಲ್ಲೂ ಭಾರತೀಯ ಅಮೆರಿಕನ್ನರು ನಮ್ಮ ದೇಶದ ಮೇಲೆ ಬೀರಿರುವ ಅಸಾಧಾರಣ ಪ್ರಭಾವದಿಂದ ನಾನು ಅಚ್ಚರಿಗೊಳಗಾಗಿದ್ದೇನೆ. ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ನಲ್ಲಿ ಭಾರತೀಯ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಐತಿಹಾಸಿಕ ಸಂಖ್ಯೆಯ ಸದಸ್ಯರನ್ನೇ ತೆಗೆದುಕೊಳ್ಳಿ” ಎಂದು ಕಮಲಾ ಶ್ವೇತಭವನದಲ್ಲಿ ಮೋದಿ ಜೊತೆಗಿನ ಔತನಕೂಟದ ಸಂದರ್ಭದಲ್ಲಿ ಹೇಳಿದ್ದಾರೆ.
“ಪ್ರಧಾನಿ ಮೋದಿಯವರೇ, ನಿಮ್ಮನ್ನು ಸ್ವಾಗತಿಸಲು ನಮಗೆ ಗೌರವವಿದೆ” ಎಂದು ಹೇಳಿದ್ದಾರೆ.
“ಅಮೆರಿಕನ್ ಕಂಪನಿಗಳಿಂದ ನೆರೆಹೊರೆಯ ವ್ಯವಹಾರಗಳಿಗೆ, ಹಾಲಿವುಡ್ ಸ್ಟುಡಿಯೋಗಳಿಂದ ನಮ್ಮ ದೇಶದಾದ್ಯಂತ ವಿಶ್ವವಿದ್ಯಾನಿಲಯ ಸಂಶೋಧನಾ ಪ್ರಯೋಗಾಲಯಗಳವರೆಗೆ ಭಾರತೀಯ ಅಮೆರಿಕನ್ನರ ಪ್ರಭಾವವನ್ನು ನಾವು ನೋಡುತ್ತಿದ್ದೇವೆ” ಎಂದಿದ್ದಾರೆ.
ಭಾರತವು ತನ್ನ ಜೀವನದ ಪ್ರಮುಖ ಭಾಗವಾಗಿದೆ ಎಂದು ಹೇಳಿದ ಅವರು, “ನನ್ನ ಸಹೋದರಿ ಮಾಯಾ ಮತ್ತು ನಾನು ಬೆಳೆಯುತ್ತಿರುವಾಗ, ನಮ್ಮ ತಾಯಿ ಪ್ರತಿ ವರ್ಷವೂ ನಮ್ಮನ್ನು ಭಾರತಕ್ಕೆ ಕರೆದುಕೊಂಡು ಹೋಗುತ್ತಿದ್ದರು ಮತ್ತು ಆ ಪ್ರವಾಸಗಳ ಉದ್ದೇಶ ಅವಳು ಎಲ್ಲಿಂದ ಬಂದಳು, ಅವಳಿಗೆ ಏನು ದೊರೆಯಿತು ಎಂಬುದನ್ನು ತೋರಿಸುವುದು ಮತ್ತು ನಮ್ಮ ಅಜ್ಜಿಯರೊಂದಿಗೆ, ನನ್ನ ಚಿಕ್ಕಪ್ಪನೊಂದಿಗೆ ಸಮಯ ಕಳೆಯುವಂತೆ ಮಾಡುವುದಾಗಿತ್ತು” ಎಂದು ಹ್ಯಾರಿಸ್ ತನ್ನ ಭಾಷಣದಲ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.