ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಪ್ರವಾಸವು ಉಭಯ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದು ಮಾತ್ರವಲ್ಲ, ಭಾರತಕ್ಕೆ ಸಾಕಷ್ಟು ಹೂಡಿಕೆಗಳು ಬರುವಂತೆ ಮಾಡಿದೆ. ಭಾರತದಲ್ಲಿ ಅತ್ಯಾಧುನಿಕ F414 ಇಂಜಿನ್ ಉತ್ಪಾದನೆಗೆ ಎಚ್ಎಎಲ್ ನೊಂದಿಗಿನ ಒಪ್ಪಂದವನ್ನು ಜಿಇ ಏರೋಸ್ಪೇಸ್ ಅಧಿಕೃತವಾಗಿ ಪ್ರಕಟಿಸಿದೆ.
ಈ ಒಪ್ಪಂದ ಈ ಹಿಂದೆಯೇ ಅಂತಿಮಗೊಂಡಿತ್ತು, ಆದರೆ ಈಗ ಅಧಿಕೃತವಾಗಿ ಪ್ರಕಟಿಸಲಾಗಿದೆ. ಒಪ್ಪಂದದಡಿ ಜಿಇಯ ಅತ್ಯಾಧುನಿಕ ಎಫ್14 ವಿಮಾನ ಇಂಜಿನ್ ಗಳು ಭಾರತದಲ್ಲಿ ಉತ್ಪಾದನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾಗೆ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲೇ ಈ ಘೋಷಣೆಯಾಗಿದೆ.
ಈ ಒಪ್ಪಂದವನ್ನು ಜಿಇ ಏರೋಸ್ಪೇಸ್ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಎಂದು ಹೇಳಿದೆ. ಜಿಇ ಏರೋಸ್ಪೇಸ್ ನ F414 ಇಂಜಿನ್ ಗಳನ್ನು ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವುದು, ಇದಕ್ಕಾಗಿ ಅಗತ್ಯ ರಫ್ತು ಅನುಮತಿಯನ್ನು ಯುಎಸ್ ಸರ್ಕಾರದಿಂದ ಪಡೆಯುವ ನಿಟ್ಟಿನಲ್ಲಿ ಜಿಇ ಏರೋಸ್ಪೇಸ್ ಕಾರ್ಯನಿರ್ವಹಿಸಲಿದೆ ಎಂದು ಜಿಇ ಏರೋ ಸ್ಪೇಸ್ ಹೇಳಿದೆ.
ಜಿಇ-ಎಫ್414 ಇಂಜಿನ್ ಗಳನ್ನು ತೇಜಸ್ ಲಘು ಯುದ್ಧ ಎಂಕೆ2 ವಿಮಾನಗಳಿಗೆ ಅಳವಡಿಕೆ ಮಾಡಲಾಗುತ್ತದೆ. ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಹಾಗೂ ಅವಳಿ-ಎಂಜಿನ್ ಡೆಕ್ ಆಧಾರಿತ ಫೈಟರ್ಗಳು ಸೇರಿದಂತೆ ಭವಿಷ್ಯದ ಫೈಟರ್ ಗಳಿಗೆ ಸಂಬಂಧಿಸಿದ ಕೆಲಸಗಳೂ ಪ್ರಗತಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.