ಇಸ್ಲಾಮಾಬಾದ್: ಇಸ್ಲಾಂ ಮೂಲಭೂತವಾದಿ ರಾಷ್ಟ್ರ ಪಾಕಿಸ್ಥಾನ ತನ್ನ ನೆಲದ ಇತರ ಧರ್ಮಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ ಹೆಸರುವಾಸಿ. ಇದೀಗ ಇಸ್ಲಾಮಿಕ್ ಗುರುತು ಕ್ಷೀಣಿಸುವುದನ್ನು ತಡೆಯಲು ಪಾಕಿಸ್ತಾನವು ತನ್ನ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಹಬ್ಬವಾದ ‘ಹೋಳಿ’ ಆಚರಣೆಯನ್ನು ನಿಷೇಧಿಸಿದೆ.
ಇಸ್ಲಾಮಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಹಬ್ಬವನ್ನು ಆಚರಿಸುತ್ತಿರುವ ವಿಡಿಯೋ ವೈರಲ್ ಆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದೇಶದ ಉನ್ನತ ಶಿಕ್ಷಣ ಆಯೋಗವು “ಇಸ್ಲಾಂನ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಯುವಕರನ್ನು ಪರಿವರ್ತಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಒತ್ತಿಹೇಳುವಂತೆ ಅಧಿಸೂಚನೆಯನ್ನು ಹೊರಡಿಸಿದೆ.
ಅಲ್ಲದೇ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಳಿಯಂತಹ ದೇಶದ ಗುರುತಿನೊಂದಿಗೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ತಡೆಯಲು ಸಲಹೆ ನೀಡಿದೆ. ವಿಶ್ವವಿದ್ಯಾಲಯಗಳು ಹೋಳಿ ಆಚರಣೆಗೆ ಸಾಕ್ಷಿಯಾಗುವುದು ದುಃಖದಾಯಕ, ಇದು ದೇಶ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಂದ ಯುವಕರ ಸಂಪರ್ಕ ಕಡಿತ ಮತ್ತು ದೇಶದ ಇಸ್ಲಾಮಿಕ್ ಗುರುತಿನ ಸವೆತ ತೋರಿಸುತ್ತದೆ ಎಂದಿದೆ.
“ಹಿಂದೂ ಹಬ್ಬವಾದ ಹೋಳಿಯನ್ನು ಗುರುತಿಸುವಲ್ಲಿ ತೋರಿದ ಉತ್ಸಾಹವು ಕಳವಳವನ್ನು ಉಂಟುಮಾಡುವ ಒಂದು ನಿದರ್ಶನವಾಗಿದೆ. ವ್ಯಾಪಕವಾಗಿ ಪ್ರಚಾರಗೊಂಡ ಈವೆಂಟ್ ಕಳವಳವನ್ನು ಉಂಟುಮಾಡಿದೆ ಮತ್ತು ದೇಶದ ಪ್ರತಿಷ್ಠೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ” ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.