ನವದೆಹಲಿ: ನಾಳೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಯೋಗ ಕಾರ್ಯಕ್ರಮಗಳು ಆರಂಭಗೊಂಡಿವೆ. ನಾಳೆ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯುವ ಯೋಗ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಮುನ್ನಡೆಸಲಿದ್ದಾರೆ.
ಈ ನಡುವೆ ಇಂದು ಯುಎಇಯ ಶಾರ್ಜಾದ ಸ್ಕೈಲೈನ್ ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಸುಮಾರು 6000 ಭಾರತೀಯ ವಲಸಿಗರು ಜಮಾಯಿಸಿ ಸಾಮೂಹಿಕ ಯೋಗ ಕಾರ್ಯಕ್ರಮ ನೆರವೇರಿಸಿದರು. ಸ್ಕೈಲೈನ್ ಯೂನಿವರ್ಸಿಟಿ ಶಾರ್ಜಾ, ಸ್ಪೋರ್ಟ್ಸ್ ಕೌನ್ಸಿಲ್ ಆಫ್ ಶಾರ್ಜಾ ಮತ್ತು ದುಬೈನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ನಡುವಿನ ನಿಕಟ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮ, ಜೂನ್ 21 ರಂದು ಬಹು ನಿರೀಕ್ಷಿತ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುನ್ನುಡಿಯಾಗಿದೆ.
ಬೆಳ್ಳಂಬೆಳಗ್ಗೆ ಪ್ರಶಾಂತ ವಾತಾವರಣಲ್ಲಿ ಯೋಗ ಮಾಡಿ ಜನರು ಪುಳಕಿತರಾದರು. ಯುಎಇಯಲ್ಲಿ ನೆಲೆಸಿರುವ ದಾದಿಯರು, ವಿದ್ಯಾರ್ಥಿಗಳು ಮತ್ತು ಭಾರತೀಯ ಮತ್ತು ಅಂತರಾಷ್ಟ್ರೀಯ ಸಮುದಾಯಗಳ ಸದಸ್ಯರು ಸೇರಿದಂತೆ ಮುಂಚೂಣಿಯ ಕೆಲಸಗಾರರ ಒಗ್ಗೂಡುವಿಕೆಗೆ ಕಾರ್ಯಕ್ರಮ ಸಾಕ್ಷಿಯಾಯಿತು. ಭಾಗವಹಿಸಿದವರು ವಿವಿಧ ಯೋಗ ಆಸನಗಳು, ಪ್ರಾಣಾಯಾಮ ಮತ್ತು ಮಾರ್ಗದರ್ಶಿ ಧ್ಯಾನವನ್ನು ಮನೋಹರವಾಗಿ ಅಭ್ಯಾಸ ಮಾಡಿ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗೆಗಿನ ತಮ್ಮ ಸಮರ್ಪಣೆಯನ್ನು ಪ್ರದರ್ಶಿಸಿದರು, ಏಕತೆ ಮತ್ತು ಸಾಮರಸ್ಯವನ್ನು ಸಮ್ಮೋಹನಗೊಳಿಸುವ ವಾತಾವರಣವನ್ನು ಸೃಷ್ಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.