ನವದೆಹಲಿ: ಮಣಿಪುರದಲ್ಲಿ ಕಳೆದ 45 ದಿನಗಳಿಂದ ನಡೆಯುತ್ತಿರುವ ನಿರಂತರ ಹಿಂಸಾಚಾರ ಅತ್ಯಂತ ಕಳವಳಕಾರಿಯಾಗಿದೆ. ಮೇ 3 ರಂದು ಲೈ ಹರೋಬಾ ಹಬ್ಬದ ಸಮಯದಲ್ಲಿ ಚುರಾಚಂದ್ಪುರದಲ್ಲಿ ಆಯೋಜಿಸಲಾದ ಪ್ರತಿಭಟನೆ ನಂತರ ಮಣಿಪುರದಲ್ಲಿ ಪ್ರಾರಂಭವಾದ ಹಿಂಸಾಚಾರ ಮತ್ತು ಅನಿಶ್ಚಿತತೆಯನ್ನು ಖಂಡಿಸುವ ಅಗತ್ಯವಿದೆ. ಶತಶತಮಾನಗಳಿಂದ ಪರಸ್ಪರ ಸೌಹಾರ್ದತೆ, ಸಹಕಾರದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದವರ ನಡುವೆ ಭುಗಿಲೆದ್ದ ಅಶಾಂತಿ, ಹಿಂಸಾಚಾರ ಇನ್ನೂ ನಿಂತಿಲ್ಲದಿರುವುದು ಅತ್ಯಂತ ವಿಷಾದನೀಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿದೆ.
ಈ ಭೀಕರ ದುಃಖದ ಅವಧಿಯಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾದ 50,000 ಕ್ಕಿಂತ ಹೆಚ್ಚು ಜನರ ಜೊತೆಗೆ ಆರ್ಎಸ್ಎಸ್ ನಿಲ್ಲುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸಾಚಾರ ಮತ್ತು ದ್ವೇಷಕ್ಕೆ ಸ್ಥಳವಿಲ್ಲ ಎಂಬುದು ಸಂಘದ ಅಭಿಪ್ರಾಯ. ಶಾಂತಿಯುತ ವಾತಾವರಣದಲ್ಲಿ ಪರಸ್ಪರ ಮಾತುಕತೆ ಮತ್ತು ಸಹೋದರತ್ವದ ಅಭಿವ್ಯಕ್ತಿಯಿಂದ ಮಾತ್ರ ಯಾವುದೇ ಸಮಸ್ಯೆಯ ಪರಿಹಾರ ಸಾಧ್ಯ ಎಂದಿದೆ.
ಪ್ರಸ್ತುತದ ಬಿಕ್ಕಟ್ಟಿಗೆ ಕಾರಣವಾಗಿರುವ ಪರಸ್ಪರ ನಂಬಿಕೆಯ ಕೊರತೆಯನ್ನು ನೀಗಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರಿಗೂ ಮನವಿ ಮಾಡುತ್ತದೆ. ಇದಕ್ಕೆ ಎರಡೂ ಸಮುದಾಯಗಳ ಸಮಗ್ರ ಪ್ರಯತ್ನದ ಅಗತ್ಯವಿದೆ. ಮೈಟೈಸ್ಗಳ ನಡುವಿನ ಅಭದ್ರತೆ ಮತ್ತು ಅಸಹಾಯಕತೆಯ ಭಾವವನ್ನು ಮತ್ತು ಕುಕಿ ಸಮುದಾಯದ ನಿಜವಾದ ಕಾಳಜಿಯನ್ನು ಏಕಕಾಲದಲ್ಲಿ ಪರಿಹರಿಸುವ ಮೂಲಕ ಸಮಸ್ಯೆ ಪರಿಹರಿಸಬಹುದು ಎಂದಿದೆ.
Manipur violence : RSS appeals for peace
The continuous violence that is going on in Manipur for the last 45 days is extremely worrisome. The violence and uncertainty that started in Manipur after the protest rally organized in Churachandpur on May 03, 2023 at the time of Lai…
— RSS (@RSSorg) June 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.