ಅಗರ್ತಾಲಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಇಂದು ತ್ರಿಪುರಾದ ಅಗರ್ತಲಾದಲ್ಲಿ ಇಬ್ಬರು ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳನ್ನು ಆಚರಿಸುವ ಒಂದು ತಿಂಗಳ ಕಾರ್ಯಕ್ರಮದ ಭಾಗವಾಗಿ ನಡ್ಡಾ ಈ ಹಿರಿಯ ನಾಗರಿಕರೊಂದಿಗೆ ಮಾತುಕತೆ ನಡೆಸಿದರು.
ಆರಂಭದಲ್ಲಿ, ಅವರು ಕೃಷ್ಣನಗರದಲ್ಲಿರುವ ಖ್ಯಾತ ರವೀಂದ್ರ ಸಂಗೀತ ಕಲಾವಿದ ತಿಥಿ ದೇವವರ್ಮನ್ ಮನೆಗೆ ಭೇಟಿ ನೀಡಿದರು ಮತ್ತು ಅವರ ತಂದೆ ಮಾನಸ್ ದೇವವರ್ಮನ್ ಅವರೊಂದಿಗೆ ಮಾತನಾಡಿದರು. ನಂತರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ವಿಶ್ವೇಶ್ವರ್ ನಂದಿ ಅವರ ಮನೆಗೆ ಭೇಟಿ ನೀಡಿದರು. ವಿಶ್ವೇಶ್ವರ್ ನಂದಿ ಅವರು ತ್ರಿಪುರಾ ಮತ್ತು ಭಾರತದ ಪ್ರಸಿದ್ಧ ಜಿಮ್ನಾಸ್ಟ್ ಪದ್ಮಶ್ರೀ ದೀಪಾ ಕರ್ಮಾಕರ್ ಅವರ ಕೋಚ್ ಆಗಿದ್ದಾರೆ.
BJP National President Shri @JPNadda met singer Smt. Tithi Debbarman today, as part of the 'Sampark Se Samarthan' campaign in Agartala, Tripura. pic.twitter.com/954k3BfYNE
— BJP (@BJP4India) June 17, 2023
BJP National President Shri @JPNadda met Indian Gymnastics Coach Shri Bishweshwar Nandi as part of the 'Sampark Se Samarthan' campaign, today, in Agartala, Tripura. pic.twitter.com/sXKfPZTm87
— BJP (@BJP4India) June 17, 2023
ನಡ್ಡಾರೊಂದಿಗೆ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಭಟ್ಟಾಚಾರ್ಯ, ಕೇಂದ್ರ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಇದ್ದರು.
ಮೋದಿ ಸರ್ಕಾರ 9 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಒಂದು ತಿಂಗಳ ಕಾಲ ʼಸಂಪರ್ಕ್ ಸೆ ಸಮರ್ಥನ್ʼ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಅದು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.