ನವದೆಹಲಿ: ಜವಹಾರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ತನಗೆ ಮಾನವ ಸಂಪನ್ಮೂಲ ಸಚಿವಾಲಯ ಆಫರ್ ನೀಡಿದೆ ಎಂಬ ವರದಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಅಲ್ಲಗೆಳೆದಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ’ಸಚಿವಾಲಯ ಇದುವರೆಗೆ ನನಗೆ ಅಧಿಕೃತ ಆಫರ್ ನೀಡಿಲ್ಲ, ನನ್ನನ್ನು ಭೇಟಿಯಾಗಲೂ ಇಲ್ಲ. ಅಲ್ಲದೇ ನನ್ನ ಕೆಲವೊಂದು ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಇದು ಸಾಧ್ಯವೂ ಇಲ್ಲ’ ಎಂದಿದ್ದಾರೆ.
ಈ ಹಿಂದೆ ಸ್ವಾಮಿ ಅವರಿಗೆ ಜವಹಾರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ಸಚಿವೆ ಸ್ಮೃತಿ ಇರಾನಿ ಆಫರ್ ನೀಡಿದ್ದರು ಎಂದು ವರದಿ ಹೇಳಿತ್ತು.
ಈ ವಿಶ್ವವಿದ್ಯಾನಿಲಯದ ಪ್ರಸ್ತುತ ಉಪ ಕುಲಪತಿಯಾಗಿರುವ ಎಸ್.ಕೆ.ಸಪೋರಿಯವರು ಜನವರಿಯಲ್ಲಿ ನಿವೃತ್ತರಾಗಲಿದ್ದಾರೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಆಗಸ್ಟ್ ತಿಂಗಳಲ್ಲಿ ಜಾಹೀರಾತು ನೀಡಲಾಗಿತ್ತು.
ಆಯ್ಕೆ ಸಮಿತಿಯು ಹೆಸರನ್ನು ಅಂತಿಮಗೊಳಿಸಿ ಅದು ರಾಷ್ಟ್ರಪತಿಗಳ ಅಂಕಿತ ಪಡೆದ ಬಳಿಕವಷ್ಟೇ ಕುಲಪತಿಯ ನೇಮಕವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.