ಟೆಹ್ರಾನ್: ಏಳು ವರ್ಷಗಳ ಬಿರುಕಿನ ನಂತರ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಲು ಇರಾನ್ ಮತ್ತು ಸೌದಿ ಅರೇಬಿಯಾ ಮುಂದಾಗಿದೆ.
ಜೂನ್ 6 ರಿಂದ ಸೌದಿ ಅರೇಬಿಯಾದಲ್ಲಿ ತನ್ನ ರಾಜತಾಂತ್ರಿಕ ಕಾರ್ಯಗಳನ್ನು ಪುನರಾರಂಭಿಸುವುದಾಗಿ ಇರಾನ್ ಹೇಳಿದೆ. ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ ಅವರು, ರಿಯಾದ್ನಲ್ಲಿರುವ ಇರಾನ್ ರಾಯಭಾರ ಕಚೇರಿ, ಜೆಡ್ಡಾದಲ್ಲಿರುವ ಅದರ ಕಾನ್ಸುಲೇಟ್ ಜನರಲ್ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ ಖಾಯಂ ಪ್ರತಿನಿಧಿಯ ಕಚೇರಿ ಇಂದು ಮತ್ತು ನಾಳೆ ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.
ಮಾರ್ಚ್ನಲ್ಲಿ, ಚೀನಾದ ಮಧ್ಯಸ್ಥಿಕೆಯ ಒಪ್ಪಂದದಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಒಪ್ಪಿಕೊಂಡವು, ಇದು ಈ ಪ್ರದೇಶದಲ್ಲಿ ನಡೆದ ಪ್ರಮುಖ ಪ್ರಗತಿಯಾಗಿದೆ.
2016ರಲ್ಲಿ ಸೌದಿಯಲ್ಲಿ ಶಿಯಾ ಧರ್ಮಗುರು ಮತ್ತು 46 ಮಂದಿ ಇತರರನ್ನು ಗಲ್ಲಿಗೇರಿಸಿದ ಘಟನೆ ನಡೆದ ತರುವಾಯ ಭುಗಿಲೆದ್ದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಸೌದಿ ರಾಜತಾಂತ್ರಿಕ ಕಟ್ಟಡದೊಳಗೆ ನುಗ್ಗಿ ದಾಂಧಲೆ ನಡೆಸಿದ್ದರು. ಹೀಗಾಗಿ ಸೌದಿ ಅರೇಬಿಯಾವು ಇರಾನ್ನೊಂದಿಗೆ ಸಂಬಂಧವನ್ನು ಮುರಿದುಕೊಂಡಿತು. ಇದೀಗ ಏಳು ವರ್ಷಗಳ ತರುವಾಯ ಮತ್ತೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಆರಂಭಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.