ನವದೆಹಲಿ : ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ತನ್ನ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಸೋಮನಾಥ ಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಸೋಮನಾಥ ಭಾರತಿ ಪ್ರಕರಣದಿಂದ ಪಕ್ಷ ಪೇಚಿಗೆ ಸಿಲುಕಿದೆ ಎಂದು ಟ್ವೀಟ್ ಮಾಡಿದ್ದಾರೆ .
ಕೊಲೆಯತ್ನ ಮತ್ತು ಮನೆಯಲ್ಲಿ ಕಿರುಕುಳ ನೀಡುತ್ತಾರೆ ಎಂದು ಮಾಜಿ ಸಚಿವ ಸೋಮನಾಥ ಭಾರತಿ ವಿರುದ್ಧ ಅವರ ಪತ್ನಿ ಲಿಪಿಕಾ ಮಿತ್ರಾ ದೂರನ್ನು ನೀಡಿದ್ದರು. ಇದರ ವಿಚಾರಣೆಯೂ ಜಾರಿಯಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಜ್ರೀವಾಲ್ ಸೋಮನಾಥ್ ಶರಣಾಗಬೇಕು. ಯಾಕೆ ಅವರು ಪ್ರಕರಣದಿಂದ ದೂರ ಸರಿಯುತ್ತಿದ್ದಾರೆ? ಅವರಿಗೆ ಜೈಲಿಗೆ ಹೋಗುವ ಭಯವಾದರೂ ಏಕೆ? ಅವರು ಪಕ್ಷ ಮತ್ತು ಅವರ ಕುಟುಂಬವನ್ನು ಪೇಚಿಗೆ ಸಿಲುಕಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.