ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಜಾಗತಿಕ ಘನತೆ ಗಮನಾರ್ಹವಾಗಿ ಬೆಳೆದಿದ್ದು, ಭಾರತದ ಸ್ಥಾನವನ್ನು ವಿಶ್ವ ನಾಯಕನ ಸ್ಥಾನದಲ್ಲಿ ಇರಿಸಿದೆ ಎಂದು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಹಯೋಗದೊಂದಿಗೆ ವಿಶೇಷ ಎನ್ಡಿಟಿವಿ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಜನರು ಹೇಳಿದ್ದಾರೆ.
“ಸಾರ್ವಜನಿಕ ಅಭಿಪ್ರಾಯ” ಎಂಬ ಸಮೀಕ್ಷೆಯಲ್ಲಿ ಬಹುತೇಕ ಜನರು ಭಾರತವು ಈಗ ವಿಶ್ವದ ಅತ್ಯಂತ ಆಕರ್ಷಕ ಹೂಡಿಕೆಯ ತಾಣವಾಗಿದೆ ಎಂಬುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಈ ತಿಂಗಳು ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸುತ್ತಿರುವಾಗ ಮತ್ತು ಮುಂದಿನ ವರ್ಷ ರಾಷ್ಟ್ರೀಯ ಚುನಾವಣೆ ಸೇರಿದಂತೆ ಸರಣಿ ಚುನಾವಣೆಗೆ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯು ಸಾರ್ವಜನಿಕ ಮನಸ್ಥಿತಿಯನ್ನು ನಿರ್ಣಯಿಸುತ್ತದೆ. ಮೇ 10 ಮತ್ತು 19 ರ ನಡುವೆ 19 ರಾಜ್ಯಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದ ಜಾಗತಿಕ ಮಟ್ಟವು ಬೆಳೆದಿದೆ ಎಂದು ಸಮೀಕ್ಷೆಗೊಳಪಟ್ಟ 63% ರಷ್ಟು ಜನರು ನಂಬಿದ್ದಾರೆ. ಸುಮಾರು 23% ಜನರು ಇದನ್ನು ಒಪ್ಪಿಲ್ಲ. 14% ಜನರು ಪ್ರಶ್ನೆಗೆ ಪ್ರತಿಕ್ರಿಯಿಸಿಲ್ಲ.
ಭಾರತವು ಈಗ ಜಾಗತಿಕವಾಗಿ ಅತ್ಯಂತ ಆಕರ್ಷಕ ಹೂಡಿಕೆಯ ತಾಣವಾಗಿದೆ ಎಂದು 55% ರಷ್ಟು ಒಪ್ಪಿಕೊಂಡರೆ, 27% ರಷ್ಟು ಮಂದಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ನಡೆಸಿದ 59% ಜನರು ಭಾರತದ ಸಾಂಸ್ಕೃತಿಕ ಬಂಡವಾಳವು ಬೆಳೆದಿದೆ ಎಂದು ನಂಬಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಈಗ ವಿಶ್ವ ನಾಯಕನಾಗಿದೆ ಎಂದು ಬಹುತೇಕ (54%)ರು ಹೇಳುತ್ತಾರೆ. ಕೆಲವು 27% ಮಂದಿ ಇದನ್ನು ಒಪ್ಪಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.