ನವದೆಹಲಿ : ಎರಡು ದೇಶಗಳ ಸಂಬಂಧ ಮತ್ತಷ್ಟು ಗಾಢವಾಗುವ ವಿಶ್ವಾಸದಿಂದ ಮೋದಿ ಇಂದು ಐರ್ಲೆಂಡ್ ಹಾಗೂ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದಾರೆ.
ವಿಶ್ವ ಸಂಸ್ಥೆ ಏರ್ಪಡಿಸಿರುವ 70 ನೇ ಮಹಾ ಅಧಿವೇಶನದಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿಯವರು ಭಾಷಣ ಮಾಡಲಿದ್ದಾರೆ. ಹಾಗೂ ಶಾಂತಿಪಾಲನಾ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಐರ್ಲೆಂಡ್ನ ಡಬ್ಲಿನ್ಗೆ ಬಂದಿಳಿಯಲಿರುವ ಮೋದಿಯವರು ಸೆ. 24 ರಂದು ಐರಿಷ್ನ ಎಂಡಾ ಕೆನ್ನಿ ಜೊತೆ ಮಾತುಕತೆ ನಡೆಸಲಿದ್ದು, ನಂತರ ಐರ್ಲೆಂಡ್ನ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. 1956 ರಲ್ಲಿ ಜವಾಹರ್ಲಾಲ್ ನೆಹರೂ ಡಬ್ಲಿನ್ಗೆ ಭೇಟಿ ನೀಡಿದ್ದರು. ತದನಂತರ ಐರ್ಲೆಂಡ್ಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಮೋದಿಯಾಗಿದ್ದಾರೆ.
ನಂತರ ನ್ಯೂಯಾರ್ಕ್ಗೆ ತೆರಳಿರುವ ಮೋದಿ ಪ್ರಖ್ಯಾತ ವಾಲ್ಡಾರ್ಫ್ ಅಸ್ಟೋರಿಯಾ ಹೋಟೆಲ್ನಲ್ಲಿ ತಂಗಲಿದ್ದು, ಸೆ. 25 ರಂದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಸಭೆಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಲಿದ್ದಾರೆ.
ಸೆ. 26 ರಂದು ಕ್ಯಾಲಿಫೋರ್ನಿಯಾಗೆ ತೆರಳಿ ಅಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ರವರೊಂದಿಗೆ ಏರ್ಪಡಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆ. 27 ರಂದು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿರುವರು.
ಇದೇ ಸಂದರ್ಭದಲ್ಲಿ ವಿಶ್ವದ ಹಲವು ನಾಯಕರು, ಪ್ರಮುಖ ಹೂಡಿಕೆದಾರರು, ಆರ್ಥಿಕ ವಲಯದಲ್ಲಿ ಬಂಡವಾಳ ಹೂಡುವ ಸಂಸ್ಥೆಗಳ ಪ್ರಮುಖರು, ಸುಮಾರು 500 ಕ್ಕೂ ಹೆಚ್ಚು ಕಂಪೆನಿಗಳ ಪ್ರಮುಖರು ಉಪಸ್ಥಿತರಿರುವ ಭೋಜನ ಕೂಟದಲ್ಲಿ ಕೂಡಾ ಪಾಲ್ಗೊಳ್ಳಲಿದ್ದಾರೆ.
ಸೆ. 28 ರಂದು ನ್ಯೂಯಾರ್ಕ್ಗೆ ಮರಳಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ದ್ವಿಪಕ್ಷೀಯ ಮಾತುನಡೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಕ್ಷಣಾ ವಲಯದ ಹಲವು ಒಪ್ಪಂದಕ್ಕೆ ಸಹಿ ಮಾಡುವ ನಿರೀಕ್ಷೆಯಿದ್ದು, ಹವಾಮಾನ ವೈಪರೀತ್ಯ, ಭಯೋತ್ಪಾದನೆ, ತಂತ್ರಜ್ಞಾನ, ಇಂಧನ, ಅಂತರಿಕ್ಷ ಮುಂತಾದ ವಲಯಗಳ ಸಹಕಾರ ಕುರಿತು ಉಭಯ ದೇಶಗಳ ನಾಯಕರು ಚರ್ಚಿಸಲಿದ್ದಾರೆ.
ಸೆ. 29 ರಂದು ಭಾರತಕ್ಕೆ ಮರಳಲಿರುವರು.
ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವ ಇರುವ ಅಮೇರಿಕಾ ಭೇಟಿ ಫಲಪ್ರದವಾಗಲಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಾಢವಾಗಲಿದೆ ಎಂದು ಹೇಳಿರುವ ಮೋದಿ, ವಿಶ್ವಸಂಸ್ಥೆ 70 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಒಂದು ಐತಿಹಾಸಿಕ ಕ್ಷಣವಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.