ಮಂಗಳೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇದರ ಬೆಳ್ಳಿಹಬ್ಬ ಸಂಭ್ರಮಾಚರಣೆ ಅಂಗವಾಗಿ ನಿರ್ಮಿಸಿದ ಸಂಘದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ನೆರವೇರಿಸಿದರು.
ಸಮಾರಂಭವನ್ನು ಮೇಯರ್ ಜಯಾನಂದ ಅಂಚನ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ಸಂಸ್ಥೆ ಮಂಗಳೂರಿನ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಸಾಕಷ್ಟು ಬಡ ಕುಟುಂಬಗಳಿಗೆ, ಸಾಲ ನೀಡಿ ಉತ್ತಮ ಸೇವೆ ನೀಡಿದೆ. ಜೊತೆಗೆ ಸಂಸ್ಥೆ ಮುಂದಕ್ಕೆ ಉತ್ತಮ ಸಂಸ್ಥೆಯಾಗಿ ರಾಜ್ಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು. ಸೇಫ್ ಲಾಕರ್ ಅನ್ನು ಡಾ. ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೃಷ್ಣ ಜೆ. ಪಾಲೆಮಾರ ವಹಿಸಿದ್ದು, ಸಂಘದ ನೂತನ ಕಟ್ಟಡ ಆಗಬೇಕೆಂದು ಸರ್ವ ಸದಸ್ಯರ ಆಶಯವಾಗಿತ್ತು ಅಲ್ಲದೆ ಸ್ಮರಣೀಯ ರೀತಿಯ ಕಟ್ಟಡ ವಾಗಿರಬೇಕು ಎನ್ನುವ ಆಶಯ ಆಗಿತ್ತು. ಇದಕ್ಕೆ ನಮ್ಮ ಎಲ್ಲಾ ಸದಸ್ಯರು ಸಹಕಾರ ಮಾಡಿದ್ದಾರೆ ಅನ್ನುವುದು ಸಂತೋಷದ ವಿಷಯವಾಗಿದೆ. ಸದಸ್ಯರು 20% ಡಿವಿಡೆಂಡ್ ಅನ್ನು ನೀಡಿದ್ದು ವಿಶೇಷವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್, ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕರಾದ ಶ್ರೀ ಮಹಾಬಲೇಶ್ವರ ಎಂ. ಎಸ್., ಶ್ರೀ ಜೆ. ಆರ್. ಲೋಬೊ, ನಿರ್ದೇಶಕ ಮಂಡಳಿಯವರು, ಸಿಬ್ಬಂದಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.