ನವದೆಹಲಿ: ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್ ನವದೆಹಲಿಗೆ ಆಗಮಿಸಿದ್ದಾರೆ. ಎಲಿ ಕೊಹೆನ್ ಅವರು ಇಂದು ಹೈದರಾಬಾದ್ ಹೌಸ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ, ನಂತರ ಅವರು ತೀನ್ ಮೂರ್ತಿ-ಹೈಫಾ ಚೌಕ್ಗೆ ತೆರಳಿ ಗೌರವ ಸಲ್ಲಿಸಲಿದ್ದಾರೆ.
ಇಂದು ಇಂಡಸ್ಟ್ರಿ ಚೇಂಬರ್ CII ಆಯೋಜಿಸುತ್ತಿರುವ ಭಾರತ-ಇಸ್ರೇಲ್ ವ್ಯಾಪಾರ ವೇದಿಕೆಯಲ್ಲಿ ಇವರು ಭಾಗವಹಿಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಕೊಹೆನ್ ಅವರು ನಾಳೆ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಂಜೆ ಆಗ್ರಾಕ್ಕೆ ತೆರಳಲಿದ್ದಾರೆ. ಆಗ್ರಾದಲ್ಲಿ ಅವರ ಕಾರ್ಯಕ್ರಮದ ನಂತರ ಅವರು ಅದೇ ದಿನ ದೆಹಲಿಗೆ ಹಿಂತಿರುಗುತ್ತಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವರು ಮೇ 11 ರಂದು ಮುಂಬೈಗೆ ತೆರಳಲಿದ್ದಾರೆ. ಅವರು ಮೇ 11 ರಂದು ಇಸ್ರೇಲ್ಗೆ ಮರಳಲಿದ್ದಾರೆ.
ಇಸ್ರೇಲ್ ವಿದೇಶಾಂಗ ಸಚಿವರ ಭೇಟಿಯು ಈ ವರ್ಷದ ಕೊನೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾರತ ಪ್ರವಾಸದ ಸಿದ್ಧತೆಯಾಗಿದೆ. ಇಸ್ರೇಲಿ ಆರ್ಥಿಕ ಸಚಿವ ನಿರ್ ಬರ್ಕತ್ ಅವರು ಏಪ್ರಿಲ್ನಲ್ಲಿ ದೊಡ್ಡ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.