ನವದೆಹಲಿ: ಪಾಕಿಸ್ಥಾನ ಮತ್ತು ಚೀನಾದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಇಸ್ರೇಲ್ನಿಂದ ದ್ರೋನ್ಗಳನ್ನು ಖರೀದಿಸಲು ಭಾರತ ಮುಂದಾಗಿದೆ.
ವೈಯಕ್ತಿಕವಾಗಿ ಯಾವುದೇ ಹಾನಿಯನ್ನು ಮಾಡಿಕೊಳ್ಳದೆ ಹೊರದೇಶಗಳ ಮೇಲೆ ಮಿಲಿಟರಿ ದಾಳಿಗಳನ್ನು ನಡೆಸಲು ಈ ದ್ರೋನ್ಗಳು ಸಹಾಯಕವಾಗಲಿದೆ.
ಪಾಕಿಸ್ಥಾನ ತನ್ನ ನೆಲದಲ್ಲಿ ಉಗ್ರರನ್ನು ಸದೆ ಬಡಿಯಲು ದೇಶೀ ನಿರ್ಮಿತ ದ್ರೋನ್ಗಳನ್ನು ಬಳಕೆ ಮಾಡುತ್ತಿದೆ ಮತ್ತು ಅಣ್ವಸ್ತ್ರಗಳನ್ನು ವೃದ್ಧಿಸುತ್ತಿದೆ ಎಂಬ ವರದಿಯಿಂದ ಎಚ್ಚೆತ್ತುಕೊಂಡಿರುವ ಭಾರತ ತನ್ನ ದ್ರೋನ್ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇಸ್ರೇಲಿ ದ್ರೋನ್ಗಳನ್ನು ಖರೀದಿಸಲು ಮೂರು ವರ್ಷದ ಹಿಂದೆಯೇ ಮಾತುಕತೆ ನಡೆದಿತ್ತು, ಇದೀಗ ಅದರ ಶೀಘ್ರ ರವಾನೆಗೆ ಭಾರತ ಮನವಿ ಮಾಡಿದೆ ಎನ್ನಲಾಗಿದೆ,
ಕಾಶ್ಮೀರದ ಮೌಂಟೆನ್ ಮತ್ತು ಚೀನಾ ಸಮೀಪದ ಗಡಿಭಾಗದಲ್ಲಿ ಗುಪ್ತಚರ ಕಾರ್ಯಕ್ಕಾಗಿ ಭಾರತ ಈಗಾಗಲೇ ಇಸ್ರೇಲ್ನ ಮಾನವರಹಿತ ಏರಿಯಲ್ ವೆಹಿಕಲ್ಗಳನ್ನು ಬಳಕೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.