ನವದೆಹಲಿ: ‘ಮನ್ ಕಿ ಬಾತ್’ ನ 100 ನೇ ಸಂಚಿಕೆಗೂ ಮುನ್ನ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ ಅವರು ಟ್ವಿಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಮೈಲಿಗಲ್ಲು ಸಾಧಿಸಿದಕ್ಕಾಗಿ ಅಭಿನಂದಿಸಿದ್ದಾರೆ. ಅಕ್ಟೋಬರ್ 3, 2014 ರಂದು ಮೊದಲ ಬಾರಿಗೆ ಪ್ರಸಾರವಾದ ಪ್ರಧಾನಿ ಮೋದಿಯವರ ಪ್ರಮುಖ ಭಾಷಣವು ಏಪ್ರಿಲ್ 30 ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸಲಿದೆ.
ಪ್ರಧಾನಿ ಮೋದಿಯವರನ್ನು ಅಭಿನಂದಿಸಿರುವ ಗೇಟ್ಸ್ ಅವರು ” ಮನ್ ಕಿ ಬಾತ್ ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಇತರ ವಿಷಯಗಳ ಮೇಲೆ ಸಮುದಾಯ ನೇತೃತ್ವದ ಕ್ರಮವನ್ನು ವೇಗಗೊಳಿಸಿದೆ. 100ನೇ ಸಂಚಿಕೆಗೆ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದಾರೆ.
100 ನೇ ಸಂಚಿಕೆಯು ಖಾಸಗಿ ಎಫ್ಎಂ ಕೇಂದ್ರಗಳು, ಸಮುದಾಯ ರೇಡಿಯೋಗಳು ಮತ್ತು ವಿವಿಧ ಟಿವಿ ಚಾನೆಲ್ಗಳು ಸೇರಿದಂತೆ 1000 ಕ್ಕೂ ಹೆಚ್ಚು ರೇಡಿಯೊ ಕೇಂದ್ರಗಳಲ್ಲಿ ಪ್ರಸಾರವಾಗಲಿದೆ. ದೇಶದಾದ್ಯಂತ ಸುಮಾರು ನಾಲ್ಕು ಲಕ್ಷ ಸ್ಥಳಗಳಲ್ಲಿ ಜನರು ಪ್ರಧಾನಿ ಭಾಷಣವನ್ನು ಕೇಳಲು ವ್ಯವಸ್ಥೆ ಮಾಡುವುದಾಗಿ ಬಿಜೆಪಿ ಹೇಳಿದೆ.
‘ಮನ್ ಕಿ ಬಾತ್ @100’ ಆಚರಣೆಯ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಸಹ ಬಿಡುಗಡೆ ಮಾಡಲಾಗಿದೆ.
Mann ki Baat has catalyzed community led action on sanitation, health, women’s economic empowerment and other issues linked to the Sustainable Development Goals. Congratulations @narendramodi on the 100th episode. https://t.co/yg1Di2srjE
— Bill Gates (@BillGates) April 29, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.