ನವದೆಹಲಿ: ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ ನೀಡಿದ್ದಾರೆ. ಇಂಗ್ಲೆಂಡ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ಅವರಿಗೆ 8 ಲಕ್ಷ ಪೌಂಡ್ (ಅಂದಾಜು 8.15 ಕೋಟಿ ರೂ.) ಸಾಲದ ಗ್ಯಾರಂಟಿ ನೀಡಲು ರಿಚರ್ಡ್ ಶಾರ್ಪ್ ನೆರವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದುವೇ ರಾಜೀನಾಮೆಗೆ ಕಾರಣ ಎಂದು ಹೇಳಲಾಗಿದೆ.
ಕೆಲ ತಿಂಗಳ ಹಿಂದೆ ಸಂಡೆ ಟೈಮ್ಸ್ ರಿಚರ್ಡ್ ಶಾರ್ಪ್ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಬೋರಿಸ್ ಜಾನ್ಸನ್ ಮತ್ತು ರಿಚರ್ಡ್ ಶಾರ್ಪ್ ವಿರುದ್ಧ ಟೀಕೆ ವ್ಯಕ್ತವಾಗಿತ್ತು.
ಈ ಅದ್ಭುತ ಸಂಸ್ಥೆಯ ಅಧ್ಯಕ್ಷರಾಗಿರುವುದು ಒಂದು ಗೌರವ ಎಂದು ರಿಚರ್ಡ್ ಶಾರ್ಪ್ ಹೇಳಿದ್ದಾರೆ. ಹೊಸ ಮುಖ್ಯಸ್ಥರ ಆಯ್ಕೆಯಾಗುವವರೆಗೂ ರಿಚರ್ಡ್ ಶಾರ್ಪ್ ಮುಖ್ಯಸ್ಥರಾಗಿಯೇ ಮುಂದುವರಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.