ನವದೆಹಲಿ: ಯುಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಸಂಸ್ಥೆಯು ಲಂಡನ್ನಲ್ಲಿ ಜಗನ್ನಾಥನ ಮೊದಲ ದೇವಾಲಯವನ್ನು ನಿರ್ಮಿಸಲು ಯೋಜಿಸುತ್ತಿದೆ.
ಈ ಯೋಜನೆಯನ್ನು ಒಡಿಶಾ ಮೂಲದ ಉದ್ಯಮಿಯೊಬ್ಬರು ಬೆಂಬಲಿಸಿದ್ದಾರೆ ಮತ್ತು ಅವರು ದೇಗುಲ ನಿರ್ಮಾಣಕ್ಕೆ 2.5 ಕೋಟಿ ಪೌಂಡ್ ನೀಡುವ ವಾಗ್ದಾನ ಮಾಡಿದ್ದಾರೆ ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ ದೇವಾಲಯದ ಮೊದಲ ಹಂತವು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಶ್ರೀ ಜಗನ್ನಾಥ್ ಸೊಸೈಟಿ ಸಂಸ್ಥೆಯು ಬಿಸ್ವನಾಥ್ ಪಟ್ನಾಯಕ್ ಅವರು ಲಂಡನ್ನಲ್ಲಿ ಭವ್ಯ ಮಂದಿರದ ನಿರ್ಮಾಣಕ್ಕಾಗಿ 2.5 ಕೋಟಿ ಪೌಂಡ್ಗಳನ್ನು ವಾಗ್ದಾನ ಮಾಡಿದ್ದಾರೆ ಎಂದು ಘೋಷಿಸಿದೆ, ಇದನ್ನು ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಂಪನಿಗಳು ಧನಸಹಾಯದ ರೂಪದಲ್ಲಿ ನೀಡುತ್ತವೆ.
15 ಎಕರೆ ಜಾಗದಲ್ಲಿ ಈ ದೇವಾಲಯ ನಿರ್ಮಾಣವಾಗಲಿದೆ. ದೇವಾಲಯದ ಭೂಮಿಯನ್ನು ಗುರುತಿಸಲಾಗಿದೆ ಮತ್ತು ಖರೀದಿಯ ಅಂತಿಮ ಹಂತದಲ್ಲಿದೆ ಎಂದು ಇಂಗ್ಲೆಂಡ್ನಲ್ಲಿರುವ ಚಾರಿಟಿ ಕಮಿಷನ್ ತಿಳಿಸಿದೆ. ದೇವಸ್ಥಾನ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸ್ಥಳೀಯಾಡಳಿತಕ್ಕೆ ಪೂರ್ವ ಯೋಜನಾ ಅರ್ಜಿಯನ್ನೂ ಸಲ್ಲಿಸಲಾಗಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.