ನವದೆಹಲಿ: ದೆಹಲಿ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದ ಸುಂದರೀಕರಣಕ್ಕೆ 45 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ವರದಿಗಳು ಹೊರಬಿದ್ದಿದ್ದು, ಕಾಂಗ್ರೆಸ್ ನಾಯಕ ಅಜಯ್ ಮಕೇನ್ ಅವರು ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿಯರ್ ಪಾಲಿಶ್, ವಿಯೆಟ್ನಾಂ ಮಾರ್ಬಲ್, ದುಬಾರಿ ಪರದೆಗಳು ಮತ್ತು ಉನ್ನತ-ಮಟ್ಟದ ಕಾರ್ಪೆಟ್ಗಳಂತಹ ಅತಿರಂಜಿತ ವಸ್ತುಗಳು ಸೇರಿದಂತೆ ಕೇಜ್ರಿವಾಲ್ ತಮ್ಮ ಐಷಾರಾಮಿ ಬಂಗಲೆಗೆ 45 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಮಕೇನ್ ಸೋಮವಾರ ಆರೋಪಿಸಿದ್ದಾರೆ.
ಅಧಿಕಾರಕ್ಕೆ ಬರುವ ಮುನ್ನ ಕೆಜ್ರಿವಾಲ್ ಅವರು ಕೆಂಪು ದೀಪವಿರುವ ಕಾರನ್ನು ಬಳಸುವುದಿಲ್ಲ ಅಥವಾ ಸಾಮಾನ್ಯ ನಾಗರಿಕರ ದುಡ್ಡಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಭದ್ರತೆಯನ್ನು ಕೋರುವುದಿಲ್ಲ ಮತ್ತು ದೊಡ್ಡ ಬಂಗಲೆಯನ್ನು ನಿರಾಕರಿಸಿ ಸಾಮಾನ್ಯ ಮನುಷ್ಯನಂತೆ ಸಾಮಾನ್ಯ ಮನೆಯಲ್ಲಿ ವಾಸಿಸುತ್ತೇನೆ ಎಂಬಿತ್ಯಾದಿ ಭರವಸೆಗಳನ್ನು ನೀಡಿದ್ದರು. ಆದರೀಗ ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಮಕೇನ್ ಆರೋಪಿಸಿದ್ದಾರೆ.
“ತಮ್ಮ ಪಕ್ಷಕ್ಕೆ ‘ಆಮ್ ಆದ್ಮಿ ಪಾರ್ಟಿ’ ಎಂದು ಹೆಸರಿಸಿದ್ದರೂ ಮತ್ತು ಬೇಕಾಬಿಟ್ಟಿ ಪ್ರತಿಜ್ಞೆಗಳನ್ನು ಮಾಡಿದರೂ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯ ಜನರು ಹತಾಶವಾಗಿ ಆಮ್ಲಜನಕ ಸಿಲಿಂಡರ್ಗಳನ್ನು ಹುಡುಕುತ್ತಿದ್ದಾಗ ಕೇಜ್ರಿವಾಲ್ ತಮ್ಮ ಬಂಗಲೆಗಾಗಿ ಕೊಟ್ಯಾಂತರ ಖರ್ಚು ಮಾಡುತ್ತಿದ್ದರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.