ನವದೆಹಲಿ: ಆರೋಗ್ಯ ಸಚಿವಾಲಯದ ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಆಂಡ್ ನೆಟ್ವರ್ಕಿಂಗ್ ಅಕ್ರಾಸ್ ಸ್ಟೇಟ್ಸ್ (ಟೆಲಿ-ಮಾನಸ್) ಸಹಾಯವಾಣಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಾರಂಭವಾದಾಗಿನಿಂದ ಒಂದು ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಈ ಸಾಧನೆಗಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ದೇಶವಾಸಿಗಳನ್ನು ಅಭಿನಂದಿಸಿದ್ದಾರೆ. ದೇಶದಾದ್ಯಂತ ಗುಣಮಟ್ಟದ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
Tele MANAS ಆರು ತಿಂಗಳಲ್ಲಿ ಒಂದು ಲಕ್ಷದ ಗಡಿಯನ್ನು ತಲುಪುವುದರೊಂದಿಗೆ, ಭಾರತದಾದ್ಯಂತ ದೃಢವಾದ ಡಿಜಿಟಲ್ ಮಾನಸಿಕ ಆರೋಗ್ಯ ನೆಟ್ವರ್ಕ್ ಅನ್ನು ನಿರ್ಮಿಸುವ ತನ್ನ ಅಂತಿಮ ಗುರಿಯನ್ನು ಸಾಧಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.
Together For Mental Health!
100,000 calls received on the Tele Manas Helpline since its launch in October 2022.
PM @NarendraModi Ji's Govt is committed to providing access to quality mental healthcare for all across the country. pic.twitter.com/h939m79yhR
— Dr Mansukh Mandaviya (@mansukhmandviya) April 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.