ನವದೆಹಲಿ: ಜಿ20 ಗ್ರೂಪ್ನ 100 ನೇ ಸಭೆಯ ಆತಿಥ್ಯದೊಂದಿಗೆ ಸೋಮವಾರ ಭಾರತವು ತನ್ನ G20 ಅಧ್ಯಕ್ಷತೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಡಿಸೆಂಬರ್ 1ರಂದು ಪ್ರಾರಂಭವಾದ ಭಾರತದ ಜಿ20 ಅಧ್ಯಕ್ಷತೆಯ ನಂತರ ಇಂದು ವಾರಣಾಸಿಯಲ್ಲಿ ಆರಂಭವಾದ ಕೃಷಿ ಪ್ರಧಾನ ವಿಜ್ಞಾನಿಗಳ ಸಭೆ (MACS) ಭಾರತ ಆಯೋಜಿಸುತ್ತಿರುವ ಜಿ20ಯ 100ನೇ ಸಭೆಯಾಗಿದೆ.
ಗೋವಾದಲ್ಲಿ ಎರಡನೇ ಆರೋಗ್ಯ ವರ್ಕಿಂಗ್ ಗ್ರೂಪ್, ಹೈದರಾಬಾದ್ನಲ್ಲಿ 2ನೇ ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಮತ್ತು ಶಿಲ್ಲಾಂಗ್ನಲ್ಲಿ ಸ್ಪೇಸ್ ಎಕಾನಮಿ ಲೀಡರ್ಸ್ ಪೂರ್ವಗಾಮಿ ಸಭೆಯನ್ನು ಸೋಮವಾರ ಆಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತದ ಜಿ20 ಅಧ್ಯಕ್ಷತೆಯ ಅಧಿಕಾರಾವಧಿ ನವೆಂಬರ್ 30ರವರೆಗೆ ಮುಂದುವರಿಯಲಿದೆ. G20 19 ದೇಶಗಳನ್ನು ಒಳಗೊಂಡಿದೆ. ಅದೆಂದರೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿಯೆ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್.
G20 ಸದಸ್ಯರು ಜಾಗತಿಕ GDP ಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ, ಜಾಗತಿಕ ವ್ಯಾಪಾರದ 75 ಪ್ರತಿಶತಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಪ್ರತಿನಿಧಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.