ನವದೆಹಲಿ: 2023 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸ್ಮರಣಾರ್ಥವಾಗಿ ಮಾರ್ಚ್ 10 ರಿಂದ 31 ರವರೆಗೆ ಭಾರತದಾದ್ಯಂತ ನಡೆದ ಖೇಲೋ ಇಂಡಿಯಾ ದಸ್ ಕಾ ದಮ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಭಾಗಿಯಾಗಿದ್ದಾರೆ. 1,500-ಕ್ಕೂ ಹೆಚ್ಚು ಕ್ರೀಡಾಕೂಟಗಳಲ್ಲಿ ದೇಶದಾದ್ಯಂತದ ಹುಡುಗಿಯರು ಭಾಗವಹಿಸಿದ್ದಾರೆ.
580 ಸ್ಪರ್ಧೆಗಳಲ್ಲಿ 30975 ಕ್ರೀಡಾಪಟುಗಳು ಸ್ಪರ್ಧಿಸುವ ಮೂಲಕ ಮಧ್ಯಪ್ರದೇಶವು ಅಥ್ಲೀಟ್ಗಳ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದೆ. ಮಧ್ಯಪ್ರದೇಶದ ನಂತರ ಆಂಧ್ರಪ್ರದೇಶವು 150 ಸ್ಪರ್ಧೆಗಳಲ್ಲಿ ಒಟ್ಟು 17011 ಮಹಿಳಾ ಅಥ್ಲೀಟ್ಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಜಿಲ್ಲಾಡಳಿತಗಳು ಆಯೋಜಿಸಿವೆ ಮತ್ತು ರಾಜ್ಯಗಳಾದ್ಯಂತ ನಗರಗಳು/ಜಿಲ್ಲೆಗಳು, ಕ್ಯಾಂಪಸ್ಗಳು/ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, SAI ಪ್ರಾದೇಶಿಕ ಕೇಂದ್ರಗಳು ಅದರ ರಾಷ್ಟ್ರೀಯ ಕೇಂದ್ರಗಳು, SAI ತರಬೇತಿ ಕೇಂದ್ರಗಳು, ವಿಸ್ತರಣಾ ಕೇಂದ್ರಗಳು, ಖೇಲೋ ಇಂಡಿಯಾ ಕೇಂದ್ರಗಳು ಹಾಗೂ ಖೇಲೋ ಇಂಡಿಯಾ ಮಾನ್ಯತೆ ಪಡೆದ ಅಕಾಡೆಮಿಗಳು ಇದನ್ನು ಆಯೋಜಿಸಿವೆ.
ಕ್ರೀಡಾ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಖೇಲೋ ಇಂಡಿಯಾ ಯೋಜನೆಯ ಮಹಿಳೆಯರಿಗಾಗಿನ ಕ್ರೀಡಾ ಘಟಕದ ಅಡಿಯಲ್ಲಿ, ರಾಷ್ಟ್ರದಾದ್ಯಂತ ಮಹಿಳೆಯರ ಎಲ್ಲಾ ವಯೋಮಾನದವರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕ್ರೀಡೆ ಜೊತೆ ಸಂಯೋಜಿಸಿದೆ. ‘ದಸ್ ಕಾ ದಮ್’ ಕಾರ್ಯಕ್ರಮವು ಜಮ್ಮುವಿನ ಶ್ರೀನಗರದಿಂದ ಕೇರಳದ ತ್ರಿಶೂರ್ ಮತ್ತು ಅಸ್ಸಾಂನ ಕೊಕ್ರಜಾರ್ನಿಂದ ಮಹಾರಾಷ್ಟ್ರದ ಅಮರಾವತಿ ಮತ್ತು ಮಧ್ಯಪ್ರದೇಶದ ಜಬಲ್ಪುರದವರೆಗೆ ನಡೆಯಿತು. ಖೋ-ಖೋ, ಈಜು, ಅಥ್ಲೆಟಿಕ್ಸ್, ವುಶು, ಬಿಲ್ಲುಗಾರಿಕೆ, ಫೆನ್ಸಿಂಗ್, ಜೂಡೋ, ವೇಟ್ಲಿಫ್ಟಿಂಗ್, ಹಾಕಿ ಮತ್ತು ಯೋಗಾಸನ ಸೇರಿದಂತೆ ವಿವಿಧ ಕ್ರೀಡೆಯನ್ನು ಒಳಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.