ಕೋಲ್ಕತ್ತಾ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾಗಿಲ್ಲ. ಅಲ್ಲದೇ ಅವರು ಜೆಕ್ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು ’ನಿಮ’ ಎಂಬ ಹೆಸರಿನ ಮಗಳಿದ್ದಳು ಎಂಬ ಮಾಹಿತಿ ಬಹಿರಂಗಗೊಂಡ ದಾಖಲೆಗಳಿಂದ ತಿಳಿದು ಬಂದಿದೆ.
ಈ ದಾಖಲೆಗಳಲ್ಲಿ ನೇತಾಜೀ ಅವರ ಆತ್ಮಚರಿತ್ರೆಯ ಹಸ್ತಪ್ರತಿ ಲಭ್ಯವಾಗಿದ್ದು, ಇದರಲ್ಲಿ ಅವರು ಜೆಕ್ ಮಹಿಳೆಯನ್ನು ಮದುವೆಯಾದ ಮಾಹಿತಿ ಇದೆ.
ಆದರೆ ಈ ಮಾಹಿತಿಯನ್ನು ನೇತಾಜೀ ಸಂಬಂಧಿ ಹಾಗೂ ಇತಿಹಾಸ ತಜ್ಞ ಸುಗತ ಬೋಸ್ ಅವರು ತಳ್ಳಿಹಾಕಿದ್ದು, ಇದೊಂದು ಕೋಳಿ ಮತ್ತು ಗೂಳಿಯ ಕಥೆಯಷ್ಟೇ ಎಂದಿದ್ದಾರೆ.
ಆದರೆ ಇನ್ನೋರ್ವ ವಿದ್ವಾಂಸರ ಪ್ರಕಾರ, ನೇತಾಜೀ ಅವರು ಎಮಿಲೀ ಸ್ಕಿನ್ಕೆಲ್ ಎಂಬುವವರನ್ನು ವಿವಾಹವಾಗಿದ್ದು, ಅವರು ಆಸ್ಟ್ರೀಯಾ ಮೂಲದವರಾಗಿದ್ದರು, ಇದು ಚೆಕೊಸ್ಲೊವೇಕಿಯಾದ ಗಡಿಭಾಗವಾಗಿದೆ. ಇವರಿಗೆ ’ಅನಿತಾ’ ಎಂಬ ಮಗಳು ಇದ್ದಳು. ಹೀಗಾಗಿ ಆತ್ಮಚರಿತ್ರೆಯಲ್ಲಿ ಜೆಕ್ ಮಹಿಳೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಅನಿತಾ ಮತ್ತು ನಿಮ ಎಂಬ ಹೆಸರಿಗೆ ಸಾಕಷ್ಟು ಸಾಮ್ಯತೆ ಇದೆ ಎಂದಿದ್ದಾರೆ.
ಫೈಲ್ ನಂ.43ರ 198ನೇ ಪುಟದಲ್ಲಿ ಈ ಮಾಹಿತಿ ಲಭ್ಯವಾಗಿದೆ, ಮೇ 12, 1948ರ ದಿನಾಂಕವುಳ್ಳ ಮಾಹಿತಿ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.