ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಶ್ಮೀರವನ್ನು ಲಡಾಖ್ಗೆ ಸಂಪರ್ಕಿಸುವ ಜೊಜಿಲಾ ಸುರಂಗದ ಪಶ್ಚಿಮ ದ್ವಾರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನು ಇಂದು ಪರಿಶೀಲಿಸಿದ್ದಾರೆ.
ಸುರಂಗದ ಕಾಮಗಾರಿ ಭರದಿಂದ ಸಾಗುತ್ತಿದೆ. ಸುರಂಗವು ಕಾಶ್ಮೀರದ ಹಿಮಾಲಯದ ಬಿ/ಡಬ್ಲ್ಯೂ ಗಂದರ್ಬಲ್ ಮತ್ತು ಲಡಾಖ್ನ ಕಾರ್ಗಿಲ್ ಜಿಲ್ಲೆಯ ದ್ರಾಸ್ ಪಟ್ಟಣದಲ್ಲಿ ಝೋಜಿ ಲಾ ಪಾಸ್ ಅಡಿಯಲ್ಲಿ ಹಾದುಹೋಗುತ್ತದೆ. ನಿರ್ಮಾಣಕ್ಕಾಗಿನ 13.14 ಕಿ.ಮೀ.ಗಳ ಪೈಕಿ 5.83 ಕಿ.ಮೀ ಸುರಂಗ ಉತ್ಖನನ ಪೂರ್ಣಗೊಂಡಿದೆ. 2026 ರ ವೇಳೆಗೆ ಸುರಂಗ ನಿರ್ಮಾಣದ ಕಾರ್ಯ ಪೂರ್ಣವಾಗುವ ನಿರೀಕ್ಷೆಯಿದೆ. ಪೂರ್ಣಗೊಂಡ ಬಳಿಕ ಇದ ಲಡಾಖ್ ಅನ್ನು ದೇಶದ ಇತರ ಭಾಗಗಳೊಂದಿಗೆ ವರ್ಷಪೂರ್ತಿ ಯಾವುದೇ ಅಡೆತಡೆ ಇಲ್ಲದೆ ಸಂಪರ್ಕಿಸಲಿದೆ.
ಗಡ್ಕರಿ ಇಂದು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಜಮ್ಮು- ಕಾಶ್ಮೀರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಸ್ತೆಗಳ ಕಾಮಗಾರಿಗಳ ಪ್ರಗತಿಯನ್ನು ಉನ್ನತ ಮಟ್ಟದ ಸಭೆ ನಡೆಸಿ ಪರಿಶೀಲಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.