ನವದೆಹಲಿ: ನಾಲ್ಕು ದಿನಗಳ ಹಿಂದೆ ಡೈರಿ ದೈತ್ಯ ಅಮುಲ್ ಮಾಡಿದ ಟ್ವೀಟ್ ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ, ಆಡಳಿತಾರೂಢ ಬಿಜೆಪಿ ವಿರುದ್ಧ ದಾಳಿ ನಡೆಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಇದನ್ನೇ ಅವಕಾಶವಾಗಿ ಬಳಸಿಕೊಂಡಿವೆ.
ಗುಜರಾತ್ ಮೂಲದ ಅಮುಲ್ ಬೆಂಗಳೂರಿನಲ್ಲಿ ಆನ್ಲೈನ್ ವಿತರಣೆಯನ್ನು ಪ್ರಾರಂಭಿಸುವ ಘೋಷಣೆಯನ್ನು ಮಾಡಲಾದ ಟ್ವಿಟ್, ಕರ್ನಾಟಕ ಹೆಮ್ಮೆಯ ಡೈರಿ ಬ್ರ್ಯಾಂಡ್ ನಂದಿನಿಯನ್ನು ನೆಚ್ಚಿಕೊಂಡವರಲ್ಲಿಅಸಮಾಧಾನವನ್ನು ಸೃಷ್ಟಿಸಿದೆ. ಕರ್ನಾಟಕದೊಳಗೆ ಅಮುಲ್ ಅನ್ನು ಪ್ರವೇಶಿಸಲು ಬಿಡಬಾರದು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.
ನಂದಿನಿ ಬ್ರ್ಯಾಂಡ್ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಡುವಿನ ವಿಲೀನದ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಸರ್ಕಾರ ಎಷ್ಟೇ ಹೇಳಿದರೂ ಪ್ರತಿಪಕ್ಷಗಳು ಬೇಕಂತಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಲೀನದ ಬಗ್ಗೆ ಊಹಾಪೋಹಗಳನ್ನು ಹಬ್ಬಿಸುತ್ತಿದೆ. ಬಿಜೆಪಿ ಪ್ರತಿಪಕ್ಷಗಳ ಈ ಕೃತ್ಯಕ್ಕೆ ತಿರುಗೇಟು ನೀಡಿದೆ.
ಬಿಜೆಪಿ ವಕ್ತಾರ ಅಮಿತ್ ಮಾಳವೀಯಾ ಅವರು ಸರಣಿ ಟ್ವಿಟ್ ಮಾಡಿ, “ಭಾರತವು ಕಾಂಗ್ರೆಸ್ ಅನ್ನು ನಂಬದಿರಲು ಒಂದು ಕಾರಣವಿದೆ. ಅವರು ಸುಳ್ಳು ಹೇಳುತ್ತಾರೆ! ನಂದಿನಿ ಮಾಲೀಕತ್ವದ ಕರ್ನಾಟಕ ಹಾಲು ಒಕ್ಕೂಟವು ಅಮುಲ್ನೊಂದಿಗೆ ವಿಲೀನಗೊಳ್ಳಲಿದೆ ಎಂಬ ಅಪಪ್ರಚಾರ ಅವರ ಇತ್ತೀಚಿನ ಸುಳ್ಳು. ವಾಸ್ತವ ಎಂದರೆ ಕೆಎಂಎಫ್ ಅನ್ನು ಬಲಪಡಿಸಲು ಮತ್ತು ನಂದಿನಿಯನ್ನು ಜಾಗತಿಕ ಬ್ರ್ಯಾಂಡ್ ಮಾಡಲು ಬಿಜೆಪಿ ಹೆಚ್ಚಿನ ಕಾರ್ಯ ಮಾಡುತ್ತಿದೆ” ಎಂದಿದ್ದಾರೆ.
ಮತ್ತೊಂದು ಟ್ವಿಟ್ನಲ್ಲಿ, “ಕೆಎಂಎಫ್ ರಾಷ್ಟ್ರದ ಎರಡನೇ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆಯಾಗಿದೆ. ಕೆಎಂಎಫ್ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಡಿಪೋಗಳನ್ನು ಹೊಂದಿದೆ. KMF ನ ಒಟ್ಟು ಮಾರಾಟದ 15% ಕರ್ನಾಟಕದ ಹೊರಗಿದೆ. ನಂದಿನಿಯನ್ನು ಸಿಂಗಾಪುರ, ಯುಎಇ ಮತ್ತು ಇತರ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಮುಲ್ ಮತ್ತು ಕೆಎಂಎಫ್ ವಿಲೀನಗೊಳ್ಳುತ್ತಿಲ್ಲ” ಎಂದಿದ್ದಾರೆ.
“ಅಮುಲ್ ಕರ್ನಾಟಕ ಪ್ರವೇಶಿಸುತ್ತಿಲ್ಲ. ಅಮುಲ್ ಮತ್ತು ಕೆಎಂಎಫ್ ಎರಡೂ ತಮ್ಮ ಉತ್ಪನ್ನಗಳನ್ನು ತ್ವರಿತ-ವಾಣಿಜ್ಯ ವೇದಿಕೆಗಳಲ್ಲಿ ಮಾರಾಟ ಮಾಡುತ್ತವೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೆಎಂಎಫ್ ವಹಿವಾಟು 10,000 ಕೋಟಿಗಳಷ್ಟು ಹೆಚ್ಚಾಗಿದೆ. 2022 ರಲ್ಲಿ ವಹಿವಾಟು 25,000 ಕೋಟಿಗಳಷ್ಟಿತ್ತು, ಅದರಲ್ಲಿ 20,000 ಕೋಟಿ ಕರ್ನಾಟಕದ ರೈತರಿಗೆ ಮರಳಿದೆ” ಎಂದು ಮತ್ತೊಂದು ಟ್ವಿಟ್ನಲ್ಲಿ ತಿಳಿಸಿದ್ದಾರೆ.
There is a reason why India doesn’t TRUST Congress. They LIE! Latest being the misinformation campaign that Karnataka Milk Federation, which owns Nandini, is going to merge with Amul. Here are the facts
– BJP has done far more to strengthen KMF and make Nandini a global brand
1/n pic.twitter.com/HWdvCjqxfK— Amit Malviya (@amitmalviya) April 9, 2023
– KMF is nation’s second largest milk cooperative
– KMF has depots in Maharashtra, Goa, Andhra Pradesh, Telangana and Tamil Nadu. 15% of KMF’s total sales is outside Karnataka
– Nandini is exported to Singapore, UAE and many other countries
– Amul and KMF are NOT merging
2/n— Amit Malviya (@amitmalviya) April 9, 2023
– Under the BJP, Karnataka is a milk surplus state. Dairy farmers are doing very well.
– Congress, which is shedding crocodile tears for brand Nandini, opposed the anti-cow slaughter bill, approved of our nandinis being slaughtered
– BJP plans to make Nandini a bigger brand
n/n pic.twitter.com/yfs2cdCrnk— Amit Malviya (@amitmalviya) April 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.