ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದು ಕೆಲವು ಎಡಚರ ಮನಸ್ಥಿತಿಯವರಿಗೆ ಅಷ್ಟಾಗಿ ಹಿಡಿಸಿಲ್ಲ. ನಟ ಪ್ರಕಾಶ್ ರೈ ಸೇರಿದಂತೆ ಇನ್ನೂ ಕೆಲವರು ಸುದೀಪ್ ಅವರನ್ನು ಅವರ ನಿರ್ಧಾರಕ್ಕಾಗಿ ಹೀಗಳೆಯುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡಿರುವ ನೀವು ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಪ್ರಕಾಶ್ ರೈ ಸುದೀಪ್ಗೆ ಹೇಳಿದ್ದಾರೆ.
“ಪ್ರೀತಿಯ ಸುದೀಪ್.. ಎಲ್ಲರೂ ಪ್ರೀತಿಸುವ ಕಲಾವಿದರಾಗಿ.. ನೀವು ಜನರ ಧ್ವನಿಯಾಗುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ನೀವು ರಾಜಕೀಯ ಪಕ್ಷದೊಂದಿಗೆ ಬಣ್ಣ ಹಚ್ಚಲು ಆಯ್ಕೆ ಮಾಡಿಕೊಂಡಿದ್ದೀರಿ” ಎಂದು ಟ್ವಿಟ್ ಮಾಡಿದ್ದಾರೆ.
ಪ್ರಕಾಶ್ ರೈ ಧೋರಣೆಯನ್ನು ನೆಟಿಜನ್ಗಳು ಖಂಡಿಸಿದ್ದು, ಅವರಿಗೆ ಅವರ ಅಸಲಿಯತ್ತನ್ನು ತೋರಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯನ್ನು ಬೆಂಬಲಿಸಿ ಅವರು ಮಾಡಿದ ಟ್ವಿಟ್ ಅನ್ನು ಮುನ್ನಲೆಗೆ ತಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರಕಾಶ್ ರೈ ಕಾಮೆಂಟ್ಗಳಿಗೆ ಪ್ರತಿಕ್ರಿಯಿಸಿದ ಸುದೀಪ್, “ಅವರು ಏನು ಹೇಳಲು ಬಯಸುತ್ತಾರೆ ಎಂಬುದನ್ನು ಅವರು ಹೇಳಬಹುದು ಆದರೆ ನಾನು ಅವರನ್ನು ಚಲನಚಿತ್ರ ನಟನಾಗಿ ಗೌರವಿಸುತ್ತೇನೆ. ನಾನು ಅವರ ಚಿತ್ರಗಳಿಗಾಗಿ ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
2022: Prakash Raj openly supported Congress.
2023: Prakash Raj is unhappy with superstar Kichcha Sudeep supporting BJP.
Hypocrisy enough, @prakashraaj?#justasking pic.twitter.com/EAT93p9MQO
— Shashank Shekhar Jha (@shashank_ssj) April 7, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.