ಇಸ್ಲಾಮಾಬಾದ್: ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವಾಗಲೂ ಆ ದೇಶದಲ್ಲಿ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ ಇಸ್ಲಾಂಗೆ ಮತಾಂತರಿಸುವ ಹಲವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಸ್ಲಾಮಿಕ್ ಮೂಲಭೂತವಾದಿಗಳು ಅಲ್ಪಸಂಖ್ಯಾತರ ಮೇಲೆ ಇನ್ನೂ ದೌರ್ಜನ್ಯಗಳನ್ನು ಎಸಗುತ್ತಲೇ ಇದ್ದಾರೆ ಮತ್ತು ಯಾರೂ ಅದರ ಬಗ್ಗೆ ಅಲ್ಲಿ ಧ್ವನಿ ಎತ್ತುತ್ತಿಲ್ಲ.
ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಸಂಸತ್ತಿನ ಕಲಾಪದಲ್ಲಿ ದಾಖಲೆ ಸಮೇತ ಇಡೀ ಜಗತ್ತಿಗೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಬಲೂಚಿಸ್ತಾನ ಸಂಸದ ದಾನೇಶ್ ಕುಮಾರ್ ಅವರು ತಮ್ಮ ಸಹೋದ್ಯೋಗಿಗಳು ಮುಸ್ಲಿಂ ಆಗುವಂತೆ ತಮ್ಮನ್ನು ಒತ್ತಾಯಿಸುತ್ತಾರೆ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ. ಅವರ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಯಾವ ದಿನಾಂಕದ ವಿಡಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದು ಹಿಂದೂಗಳ ಸ್ಥಿತಿ ಹೇಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಪಾಕ್ ಸಂಸತ್ತಿನ ಮೇಲ್ಮನೆಯಲ್ಲಿ ಸೆನೆಟ್ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ದಾನೇಶ್ ಕುಮಾರ್, “ಸರ್, ನಾನು ನಿಮಗೆ ಹೇಳುತ್ತೇನೆ, ಕಲ್ಮವನ್ನು ಓದಲು ಒತ್ತಾಯಿಸುವ ಸ್ನೇಹಿತರಿದ್ದಾರೆ, ಮುಸ್ಲಿಂ ಆಗು ಎನ್ನುವವರು ಇದ್ದಾರೆ” ಎಂದು ಹೇಳಿದ್ದಾರೆ.
ದಾನೇಶ್ ಕುಮಾರ್ ಒಬ್ಬ ಪಾಕಿಸ್ತಾನಿ ರಾಜಕಾರಣಿ. ಅವರು ಬಲೂಚಿಸ್ತಾನದ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ. ಅವರು ಪ್ರಸ್ತುತ ಪಾಕಿಸ್ತಾನಿ ಸಂಸತ್ತಿನ ಮೇಲ್ಮನೆಯಾದ ಸೆನೆಟ್ನ ಸದಸ್ಯರಾಗಿದ್ದಾರೆ. ಅವರು ಬಲೂಚಿಸ್ತಾನ್ ಅವಾಮಿ ಪಕ್ಷದ ಟಿಕೆಟ್ನಲ್ಲಿ 2018 ರ ಪಾಕಿಸ್ತಾನಿ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾದ ಸ್ಥಾನದ ಮೇಲೆ ಬಲೂಚಿಸ್ತಾನದ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದರು
Imagine the condition of normal minority citizens in Pakistan !!!
Minority Hindu Senator Danesh Kumar can be seen saying that his fellow Parliamentarians ask him to get converted to Islam to live a normal life in Pakistan.pic.twitter.com/SVa6dxsDzj
— Megh Updates 🚨™ (@MeghUpdates) April 6, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.