ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಸಹ-ಆತಿಥ್ಯದಲ್ಲಿ ನಡೆದ ಎರಡನೇ ಪ್ರಜಾಪ್ರಭುತ್ವಕ್ಕಾಗಿನ ಶೃಂಗಸಭೆಯನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದರು.
“ಭಾರತವು ಅನೇಕ ಜಾಗತಿಕ ಸವಾಲುಗಳ ಹೊರತಾಗಿಯೂ, ಇಂದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಇದು ಪ್ರಜಾಪ್ರಭುತ್ವವು ಮಹತ್ವದ ಕಾರ್ಯ ಮಾಡಬಲ್ಲದು ಎಂಬುದಕ್ಕೆ ಸಾಕ್ಷಿ” ಎಂದು ಈ ವೇಳೆ ಮೋದಿ ಹೇಳಿದ್ದಾರೆ.
“ಚುನಾಯಿತ ನಾಯಕರ ಕಲ್ಪನೆಯು ಪ್ರಪಂಚದ ಇತರ ಭಾಗಗಳಿಗಿಂತ ಬಹಳ ಹಿಂದೆಯೇ ಪ್ರಾಚೀನ ಭಾರತದಲ್ಲಿ ಸಾಮಾನ್ಯ ಲಕ್ಷಣವಾಗಿತ್ತು. ಪ್ರಜಾಪ್ರಭುತ್ವದ ಸದ್ಗುಣಗಳ ಬಗ್ಗೆ ಹೇಳಲು ಬಹಳಷ್ಟು ಇದೆ, ಆದರೆ ಭಾರತವು ಅನೇಕ ಜಾಗತಿಕ ಸವಾಲುಗಳ ಹೊರತಾಗಿಯೂ ಇಂದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದು ನಾನು ಹೇಳುತ್ತೇನೆ. ಇದು ಜಗತ್ತಿನ ಪ್ರಜಾಪ್ರಭುತ್ವದ ಅತ್ಯುತ್ತಮ ಜಾಹೀರಾತು. ಇದು, ಪ್ರಜಾಪ್ರಭುತ್ವವು ಏನು ತಲುಪಿಸಬಲ್ಲದು ಎಂದು ಹೇಳುತ್ತದೆ” ಎಂದಿದ್ದಾರೆ.
ಪ್ರಜಾಪ್ರಭುತ್ವ ಕೇವಲ ರಚನೆಯಲ್ಲ. ಇದು ಚೈತನ್ಯವೂ ಆಗಿದೆ. ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ಸಮಾನವಾಗಿ ಮುಖ್ಯವೆಂದು ನಂಬಲಾಗುತ್ತದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು, ನೀರನ್ನು ಸಂರಕ್ಷಿಸುವುದು ಅಥವಾ ಎಲ್ಲರಿಗೂ ಶುದ್ಧ ಅಡುಗೆ ಇಂಧನವನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿರಲಿ, ಪ್ರತಿಯೊಂದು ಉಪಕ್ರಮವು ಭಾರತದ ನಾಗರಿಕರ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುತ್ತದೆ ಎಂದಿದ್ದಾರೆ.
ನಮ್ಮ ಲಸಿಕೆ ಮೈತ್ರಿ ಉಪಕ್ರಮವು ಲಕ್ಷಾಂತರ ಲಸಿಕೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಂಡಿದೆ. ‘ವಸುಧೈವ ಕುಟುಂಬಕಂ’ ಅಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಆತ್ಮಗಳು ಇದಕ್ಕೆ ಮಾರ್ಗದರ್ಶನ ನೀಡಿವೆ. ಭಾರತದಲ್ಲಿ, ನಮ್ಮ ಮಾರ್ಗದರ್ಶಿ ತತ್ವವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಆಗಿದೆ ಎಂದರು.
ಪ್ರಜಾಪ್ರಭುತ್ವದ ವಿಷಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ, ಅದರಲ್ಲೂ ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವ ಬಗ್ಗೆ ಮಾತನಾಡಿ ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾದ ಸಂದರ್ಭದಲ್ಲಿ ಈ ಶೃಂಗಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.