ನವದೆಹಲಿ: ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸುವ ಉದ್ದೇಶದಿಂದ ಸೋಮವಾರ ಭಾರತ ಮತ್ತು ಪಾಕಿಸ್ಥಾನದ ನಡುವೆ ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಮಹತ್ವದ ಧ್ವಜಸಭೆ ನಡೆದಿದೆ.
ಬೆಳಿಗ್ಗೆ 11.30ರ ಸುಮಾರಿಗೆ ಎರಡೂ ದೇಶದ ಸೇನಾಧಿಕಾರಿಗಳು ಪೂಂಚ್ನ ಚಕನ್-ದಾ-ಭಾಗ್ ಕ್ರಾಸಿಂಗ್ ಪಾಯಿಂಟ್ನಲ್ಲಿ ಭೇಟಿಯಾಗಿ ಧ್ವಜ ಸಭೆ ನಡೆಸಿದ್ದಾರೆ.
121ನೇ ಬ್ರಿಗೇಡ್ನ ಕಮಾಂಡರ್, ಬ್ರಿಗೇಡಿಯರ್ ಎಚ್ಎಸ್ ಸರೀನ್ ಅವರು ಭಾರತದ ನಿಯೋಗದ ಮುಂದಾಳತ್ವ ವಹಿಸಿದರೆ, ಪಾಕಿಸ್ಥಾನದ ಕಡೆಯಿಂದ ಪೂಂಚ್-ರಾವಲ್ಕೋಟೆಯ ಬ್ರಿಗೇಡ್ ಕಮಾಂಡರ್ ನೇತೃತ್ವ ವಹಿಸಿದರು.
ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತು ಅದನ್ನು ತಡೆಗಟ್ಟುವ ಬಗೆಯನ್ನು ಈ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.