ನವದೆಹಲಿ: ಭಾರತದ ಒಟ್ಟಾರೆ ರಫ್ತು ಸಾರ್ವಕಾಲಿಕ ಗರಿಷ್ಠ 750 ಬಿಲಿಯನ್ ಯುಎಸ್ ಡಾಲರ್ ದಾಟಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಇದು ಸಾರ್ವಕಾಲಿಕ ಗರಿಷ್ಠವಾಗಿದೆ ಮತ್ತು ದೇಶವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ವರ್ಷದಲ್ಲಿ ಈ ಸಾಧನೆಯಾಗಿರುವುದು ವಿಶೇಷ ಎಂದು ಹೇಳಿದರು.
ನಿನ್ನೆ ನವದೆಹಲಿಯಲ್ಲಿ ASSOCHAM ವಾರ್ಷಿಕ ಅಧಿವೇಶನ 2023 ಅನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ಸರಕು ಮತ್ತು ಸೇವಾ ಕ್ಷೇತ್ರಗಳಲ್ಲಿ ಭಾರತ ಆರೋಗ್ಯಕರ ಬೆಳವಣಿಗೆಯನ್ನು ಕಂಡಿದೆ. ಜಿ 20 ಅಧ್ಯಕ್ಷ ಸ್ಥಾನವು ಭಾರತವನ್ನು ಜಾಗತಿಕವಾಗಿ ಇರಿಸಲು ಒಂದು ಅನನ್ಯ ಅವಕಾಶವನ್ನು ನೀಡಿದೆ ಮತ್ತು ಪ್ರಪಂಚದಾದ್ಯಂತ ಭಾರತದ ವ್ಯವಹಾರವನ್ನು ಪ್ರದರ್ಶಿಸಲು ಉದ್ಯಮ ಮತ್ತು ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
2020-2021 ರಲ್ಲಿ ಇದ್ದ 500 ಬಿಲಿಯನ್ ಡಾಲರ್ನಿಂದ 750 ಬಿಲಿಯನ್ ಡಾಲರ್ಗೆ ರಫ್ತು ಅಂಕಿಅಂಶ ಅತ್ಯಂತ ಸವಾಲಿನ ಸಮಯದಲ್ಲಿ ಏರಿದೆ ಎಂದು ಹೇಳಿದ ಅವರು, ಉಕ್ರೇನ್ನಲ್ಲಿ ಯುದ್ಧ ಮತ್ತು ಹೆಚ್ಚಿನ ಹಣದುಬ್ಬರದ ಜಾಗತಿಕವಾಗಿ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳ ನಡುವೆಯೂ ರಫ್ತು ಏರಿಕೆಯಾಗಿರುವುದು ಮಹತ್ವದ್ದಾಗಿದೆ ಎಂದರು.
ಇಡೀ ಜಗತ್ತು ಆರ್ಥಿಕ ಹಿಂಜರಿತದಲ್ಲಿದೆ, ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹಣದುಬ್ಬರವು ಸಾರ್ವಕಾಲಿಕ ಎತ್ತರದಲ್ಲಿದೆ, ಬಡ್ಡಿದರಗಳು ಹೆಚ್ಚಾಗುತ್ತಿವೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಕತ್ತಲೆಯ ಭಾವನೆ ಇದೆ. ಆದರೆ ಭಾರತ ಹೆಚ್ಚಿನ ಕಾರ್ಯಕ್ಷಮತೆ ತೋರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.