ನವದೆಹಲಿ: ಕರ್ನಾಲ್ ಮೂಲದ ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್ಡಿಆರ್ಐ) ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ದೇಸಿ ತಳಿ ಗಿರ್ ಹೆಣ್ಣು ಕರುವನ್ನು ತದ್ರೂಪಿ (clone) ಮಾಡಿದೆ, ಅದು ದಿನಕ್ಕೆ 15 ಲೀಟರ್ಗಿಂತಲೂ ಹೆಚ್ಚು ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತದ ಮೊದಲ ಕ್ಲೋನ್ ಮಾಡಿದ ಗಿರ್ ಹೆಣ್ಣು ಕರುವಿಗೆ ಗಂಗಾ ಎಂದು ಹೆಸರಿಡಲಾಗಿದೆ. ಅವಳು ಮಾರ್ಚ್ 16 ರಂದು 32 ಕಿಲೋಗ್ರಾಂ (ಕೆಜಿ) ತೂಕದೊಂದಿಗೆ ಜನಿಸಿದಳು ಮತ್ತು ಚೆನ್ನಾಗಿ ಬೆಳೆಯುತ್ತಿದ್ದಾಳೆ ಎಂದು ಎನ್ಡಿಆರ್ಐ ಹೇಳಿದೆ.
ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ ಈ ಬೆಳವಣಿಗೆಯಾಗಿದೆ.
ದೇಶದ ಪ್ರಧಾನ ಡೈರಿ ಸಂಶೋಧನಾ ಸಂಸ್ಥೆಯಾದ NDRI, 2021 ರಿಂದ ಗಿರ್ ಮತ್ತು ಸಾಹಿವಾಲ್ನಂತಹ ಸ್ಥಳೀಯ ಹೆಚ್ಚು ಹಾಲು ನೀಡುವ ಹಸುವಿನ ತಳಿಗಳನ್ನು ಕ್ಲೋನ್ ಮಾಡುವ ಯೋಜನೆಯಡಿ ಕೆಲಸ ಮಾಡುತ್ತಿದೆ.
ಈ ಅಬೀಜ ಸಂತಾನೋತ್ಪತ್ತಿಯ ವಿಧಾನವೂ ಸಂಪೂರ್ಣ ಸ್ಥಳೀಯವಾಗಿದ್ದಾರೆ, ಇದರ ಹಿಂದೆ ವಿಜ್ಞಾನಿಗಳ ದೊಡ್ಡ ತಂಡವೇ ಇದೆ. ಕ್ಲೋನ್ ಮಾಡಿದ ಜಾನುವಾರುಗಳನ್ನು ಉತ್ಪಾದಿಸಲು ಅವರು ಎರಡು ವರ್ಷಗಳನ್ನು ತೆಗೆದುಕೊಂಡಿದ್ದಾರೆ.
ಗಿರ್, ಸಾಹಿವಾಲ್, ಥಾರ್ಪಾರ್ಕರ್ ಮತ್ತು ರೆಡ್ ಸಿಂಧಿ ಭಾರತೀಯ ಜಾನುವಾರು ತಳಿಗಳಾಗಿದ್ದು ಅವು ಭಾರತೀಯ ಡೈರಿ ಉದ್ಯಮದ ಬೆಳವಣಿಗೆಗೆ ಮತ್ತು ಹಾಲಿನ ಉತ್ಪಾದನೆಗೆ ನಿರ್ಣಾಯಕವಾಗಿವೆ.
NDRI ಮತ್ತು ಡೆಹ್ರಾಡೂನ್ ಮೂಲದ ಉತ್ತರಾಖಂಡ್ ಜಾನುವಾರು ಅಭಿವೃದ್ಧಿ ಮಂಡಳಿ ಒಟ್ಟಾಗಿ ಅಬೀಜ ಸಂತಾನೋತ್ಪತ್ತಿ (ಕ್ಲೋನ್) ಕಾರ್ಯಕ್ರಮವನ್ನು ಪ್ರಾರಂಭಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.