ಗುವಾಹಟಿ: ಅಸ್ಸಾಂನಲ್ಲಿ “ಜನಜಾತಿ ಧರ್ಮ ಸಂಸ್ಕೃತಿ ಸುರಕ್ಷಾ ಮಂಚ್ (ಜೆಡಿಎಸ್ಎಸ್ಎಂ)” ಬ್ಯಾನರ್ ಅಡಿಯಲ್ಲಿ ವಿವಿಧ ಜನಜಾತಿ (ಬುಡಕಟ್ಟು) ಗಳನ್ನು ಪ್ರತಿನಿಧಿಸುವ 60,000 ಕ್ಕೂ ಹೆಚ್ಚು ಜನರು ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಿದ್ದು, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ಜನಜಾತಿ ಜನರನ್ನು ಪಟ್ಟಿಯಿಂದ ತೆಗೆದುಹಾಕಬೇಕು ಮತ್ತು ಮೀಸಲಾತಿಯಂತಹ ಪ್ರಯೋಜನಗಳನ್ನು ಕಸಿದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೃಹತ್ ಜಾಗೃತಿಯ ಪರಿಣಾಮವಾಗಿ, ಜನಜಾತಿ ಜನರಲ್ಲಿ ಅರಿವು ಮೂಡಿದೆ. ಹೀಗಾಗಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಶಾಸನಬದ್ಧ ಪ್ರಯೋಜನಗಳನ್ನು ಕಸಿದುಕೊಳ್ಳಬೇಕು ಎಂದು ಒತ್ತಾಯಿಸಲಾರಂಭಿಸಿದ್ದಾರೆ. ಜೆಡಿಎಸ್ಎಂ ಜನಜಾತಿ ಜನರ ಸಂಸ್ಕೃತಿ ಮತ್ತು ಧರ್ಮಕ್ಕೆ ಮತಾಂತರಗೊಂಡವರು ಅಪಚಾರವೆಸಗುತ್ತಿದ್ದಾರೆ ಎಂದು ಆರೋಪಿಸಿದೆ. ಆದ್ದರಿಂದ ಅವರ ಹೆಸರನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಯಿಂದ ತೆಗೆದುಹಾಕಬೇಕು ಮತ್ತು ಎಲ್ಲಾ ಮೀಸಲಾತಿ ಸೌಲಭ್ಯಗಳನ್ನು ಕಿತ್ತುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಅಸ್ಸಾಂನ ಜೆಡಿಎಸ್ಎಸ್ಎಂ ಕಾರ್ಯದರ್ಶಿ ವಿನೋದ್ ಕುನ್ಬಾಂಗ್ ಅವರು ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದವರು ತಮ್ಮ ದೇವರಿಗೆ ಪೂಜೆ ನೆರವೇರಿಸಿದರು. ಜೆಡಿಎಸ್ಎಸ್ಎಂ ಅಧ್ಯಕ್ಷ ಜಲೇಶ್ವರ ಬ್ರಹ್ಮಾವರ ಮತ್ತು ಬೋಗಿರಾಮ್ ಬೋಡೋ ಧ್ವಜಾರೋಹಣ ನೆರವೇರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.