ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಭಾನುವಾರ ಇಂಡಿಗೋ ಏರ್ಲೈನ್ನ ಮೊದಲ ದೆಹಲಿ-ಧರ್ಮಶಾಲಾ ವಿಮಾನಕ್ಕೆ ಚಾಲನೆ ನೀಡಿದರು.
ಇಂಡಿಗೋ ವಿಮಾನಯಾನ ಸಂಸ್ಥೆಯು ಈ ಮಾರ್ಗದಲ್ಲಿ ನಿತ್ಯ ವಿಮಾನಗಳನ್ನು ನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್ ಅವರು ಹಿಮಾಚಲ ಪ್ರದೇಶಕ್ಕೆ ಇಂಡಿಗೋ ವಾಯುಯಾನ ಸಂಪರ್ಕವನ್ನು ಸುಗಮಗೊಳಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವಿಮಾನವು ರಾಜ್ಯದ ಅರ್ಧದಷ್ಟು ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಇಂಡಿಗೋ ಗುಡ್ಡಗಾಅಡು ರಾಜ್ಯಕ್ಕೆ ಹಾರಾಟ ನಡೆಸದೆ ನಿಜವಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ ವಿಮಾನ ನಿಲ್ದಾಣದ ಮೂಲಸೌಕರ್ಯಗಳ ತ್ವರಿತ ವಿಸ್ತರಣೆಯ ಶ್ರೇಯಸ್ಸು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಕಡಿಮೆ ಅವಧಿಯಲ್ಲಿ ವಿಮಾನನಿಲ್ದಾಣಗಳ ಸಂಖ್ಯೆ 74 ರಿಂದ 140 ಕ್ಕೆ ಏರಿದೆ ಎಂದು ಅವರು ಹೇಳಿದರು. ಉಡಾನ್ ಯೋಜನೆಯಿಂದಾಗಿ ಹವಾಯಿ ಚಪ್ಪಲ್ನಲ್ಲಿರುವ ಜನರು ಹವಾಯಿ ಜಹಾಜ್ನಲ್ಲಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಕಳೆದ 65 ವರ್ಷಗಳಲ್ಲಿ ಸಾಧಿಸದಿದ್ದನ್ನು ಕಳೆದ 9 ವರ್ಷಗಳಲ್ಲಿ 148 ವಿಮಾನ ನಿಲ್ದಾಣಗಳು, ವಾಟರ್ಡ್ರೋಮ್ ಮತ್ತು ಹೆಲಿಪೋರ್ಟ್ಗಳನ್ನು ರಚಿಸುವ ಮೂಲಕ ಸಾಧಿಸಲಾಗಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಯನ್ನು 200 ದಾಟುವ ಗುರಿಯೊಂದಿಗೆ ತಮ್ಮ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
ನಾಗರಿಕ ವಿಮಾನಯಾನ ಸಚಿವರು ಧರ್ಮಶಾಲಾ ವಿಮಾನ ನಿಲ್ದಾಣದ ವಿಸ್ತರಣೆಯ ಎರಡನೇ ಹಂತದ ಯೋಜನೆಯು ನಡೆಯುತ್ತಿದೆ, ಇದು ಅಂತಿಮವಾಗಿ ಏರ್ಬಸ್ ಎ 320 ಅನ್ನು ಇಳಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಪ್ರಸ್ತುತ, ಉಡಾನ್ ಯೋಜನೆಯಡಿ ಹಿಮಾಚಲ ರಾಜ್ಯಕ್ಕೆ 44 ಮಾರ್ಗಗಳನ್ನು ಒದಗಿಸಲಾಗಿದೆ, ಅವುಗಳಲ್ಲಿ 22 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.