ನ್ಯೂಯಾರ್ಕ್: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಹೊರಗೆ ಬೃಹತ್ ಸಂಖ್ಯೆಯಲ್ಲಿ ನೆರೆದ ಭಾರತೀಯರು ತಿರಂಗಾ ಹಾರಿಸಿ ಡೋಲು ಬಾರಿಸಿ ಖಲಿಸ್ತಾನ್ ಬೆಂಬಲಿಗರಿಗೆ ದಿಟ್ಟ ಪ್ರತಿಕ್ರಿಯೆ ನೀಡಿದರು.
ಕಳೆದ ವಾರದ ಭಾರತೀಯ ದೂತವಾಸ ಕಛೇರಿ ಹೊರಗೆ ಖಲಿಸ್ತಾನಿ ಬೆಂಬಲಿಗರು ನಡೆಸಿದ ದಾಂಧಲೆಗೆ ಪ್ರತಿಕ್ರಿಯೆಯಾಗಿ ಇಂದು ಭಾರತೀಯರು ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಬೀಸುತ್ತಿರುವುದು ಕಂಡುಬಂದಿದೆ.
ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊ, ಕಾನ್ಸುಲೇಟ್ ಕಟ್ಟಡದ ಹೊರಗೆ ಜಮಾಯಿಸಿದ ಹಲವಾರು ಭಾರತೀಯರು ಭಾರತ ಮತ್ತು ಯುಎಸ್ ರಾಷ್ಟ್ರೀಯ ಧ್ವಜವನ್ನು ಹಿಡಿದು “ವಂದೇ ಮಾತರಂ” ಮತ್ತು “ಭಾರತ್ ಮಾತಾ ಕೀ ಜೈ” ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು ಮತ್ತು ಡೋಲು ಬಾರಿಸುವುದನ್ನು ಸಹ ನೋಡಬಹುದು. ಕೆಲವು ಪ್ರತಿಭಟನಾಕಾರರು ದೂರದಲ್ಲಿ ಖಲಿಸ್ತಾನ್ ಧ್ವಜಗಳನ್ನು ಬೀಸುತ್ತಿರುವುದು ಕೂಡ ಕಂಡು ಬಂದಿದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೇಲೆ ಗುಂಪೊಂದು ದಾಳಿ ಮಾಡಿ ಕಟ್ಟಡದ ಹೊರ ಗೋಡೆಯ ಮೇಲೆ “ಅಮೃತಪಾಲ್ ಅನ್ನು ಸ್ವತಂತ್ರಗೊಳಿಸಿ” ಎಂದು ಬರೆದ ವಾರಗಳ ನಂತರ ಭಾರತೀಯರು ಭಾರತದ ಪರವಾಗಿ ಇಂದು ಬೃಹತ್ಯ ಪ್ರದರ್ಶನ ನಡೆಸಿದ್ದಾರೆ.
#WATCH | United States: Indians gather outside the Indian consulate in San Francisco in support of India's unity pic.twitter.com/tuLxMBV3q0
— ANI (@ANI) March 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.