ನವದೆಹಲಿ: ಭಯಾನಕ ಉಗ್ರ ಸಂಘಟನೆ ಇಸಿಸ್ ಸೇರಲು ಬಯಸಿದ ಹಿಂದೂ ಯುವತಿಯೊಬ್ಬಳ ಪ್ರಯತ್ನವನ್ನು ತಡೆದ ಆಕೆಯ ತಂದೆ ರಾಷ್ಟ್ರೀಯ ತನಿಖಾ ದಳಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವರದಿಯ ಪ್ರಕಾರ, 20 ವರ್ಷದ ಯುವತಿಯೊಬ್ಬಳು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು ಬಳಿಕ ಉನ್ನತ ವ್ಯಾಸಂಗಕ್ಕೆ ಆಸ್ಟ್ರೇಲಿಯಾಗೆ ತೆರಳಿದ್ದಳು. ಅಲ್ಲಿ ಆಕೆ ಇಸಿಸ್ ಉಗ್ರರ ಸಂಪರ್ಕಕ್ಕೆ ಬಂದಿದ್ದಾಳೆ. ಅಲ್ಲದೇ ಅವರಿಂದ ಪ್ರಭಾವಿತರಾಗಿ ಸಿರಿಯಾಗೆ ಪ್ರಯಾಣ ಬೆಳೆಸುವ ಏರ್ಪಾಟು ಮಾಡಿಕೊಂಡಿದ್ದಳು.
ಮಗಳ ಈ ಕೃತ್ಯಗಳ ಸುಳಿವು ಪಡೆದ ನಿವೃತ್ತ ಸೈನಿಕರಾಗಿರುವ ಆಕೆಯ ತಂದೆ ತಕ್ಷಣವೇ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದ್ದಾರೆ. ತನಿಖಾ ದಳ ಗುಪ್ತಚರ ಇಲಾಖೆಯ ಸಹಾಯ ಪಡೆದು ಆಕೆಯ ವಿರುದ್ಧ ಸಾಕ್ಷ್ಯ ಸಂಗ್ರಹ ಮಾಡಿದೆ.
ಇದೀಗ ಆಕೆಗೆ ಇಸಿಸ್ ಸೇರುವ ಭಯಾನಕತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.