News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ ಮಹಾನ್ ಚೇತನಗಳನ್ನು ಅವಮಾನಿಸಬೇಡಿ: ಕಾಂಗ್ರೆಸ್‌ಗೆ ರಿಜ್ಜು ಕಿವಿಮಾತು

ನವದೆಹಲಿ: ವೀರ್ ಸಾವರ್ಕರ್ ಅವರ ಕುರಿತ ಟ್ವೀಟ್ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ಮಹಾನ್ ಚೇತನಗಳನ್ನು ಅವಮಾನಿಸಬಾರದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಫೋಟೋವನ್ನು  “ಸಾವರ್ಕರ್ ಸಮ್ಜಾ ಕ್ಯಾ… ನಾಮ್ ರಾಹುಲ್ ಗಾಂಧಿ ಹೈ (ಇದು ಸಾವರ್ಕರ್ ಎಂದು ನೀವು ಭಾವಿಸುತ್ತೀರಾ.. ಅವರ ಹೆಸರು ರಾಹುಲ್ ಗಾಂಧಿ)” ಎಂಬ ಒಕ್ಕಣೆಯೊಂದಿಗೆ ಹಂಚಿಕೊಂಡಿದೆ.

ಬ್ರಿಟನ್‌ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ರಾಹುಲ್‌ ಹೇಳಿಕೆಗಳ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ನಡೆಯುತ್ತಿರುವ ನಡುವೆ ಈ ಪೋಸ್ಟ್‌ ಹಾಕಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರಿಜ್ಜು, “ದಯವಿಟ್ಟು ಮಹಾನ್ ಚೇತನ ವೀರ ಸಾವರ್ಕರ್ ಅವರನ್ನು ಅವಮಾನಿಸಬೇಡಿ. ಕೈಮುಗಿದು ಪ್ರಾರ್ಥಿಸುತ್ತೇನೆ” ಎಂದು  ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅರಾಜಕತಾವಾದಿ ಮತ್ತು ಮಾವೋವಾದಿ ಅಂಶಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೂ ಮೊದಲು, ಕಿರಣ್ ರಿಜಿಜು ಅವರು ಯುಕೆಯಲ್ಲಿ ಭಾರತದ ಕುರಿತು ರಾಹುಲ್ ಗಾಂಧಿಯವರ ಟೀಕೆಗಳ ಬಗ್ಗೆ ವಾಗ್ದಾಳಿ ನಡೆಸಿದರು ಮತ್ತು ದೇಶದ ಅವಮಾನದ ಬಗ್ಗೆ ನಾಗರಿಕರು ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ವಿರುದ್ಧ ಮುಸುಕಿನ ದಾಳಿ ನಡೆಸಿದ ರಿಜಿಜು, “ನಮ್ಮನ್ನು ಎಷ್ಟು ಬೇಕಾದರೂ ನಿಂದಿಸಿ ಆದರೆ ರಾಷ್ಟ್ರವನ್ನು ಅವಮಾನಿಸಲು ನಾವು ಬಿಡಲಾರೆವು, ರಾಹುಲ್ ಅವರು ನ್ಯಾಯಾಂಗವನ್ನು ಅವಮಾನಿಸಿದ್ದಾರೆ, ನಮ್ಮ ನ್ಯಾಯಾಂಗ ವ್ಯವಸ್ಥೆಯು ದೃಢವಾಗಿದೆ, ರಾಹುಲ್ ಅವರು ಅವಮಾನಿಸಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಬೇಕು ಎಂಬುದು ಒಂದೇ ಬೇಡಿಕೆ. ಭಾರತವು ಇನ್ನು ಮುಂದೆ ಅವರ ದೇಶವಲ್ಲ, ಅವರು ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.

“ಕಾಂಗ್ರೆಸ್ ಮತ್ತು ರಾಹುಲ್ ಅವರನ್ನು ಈ ದೇಶದ ಜನರು ತಿರಸ್ಕರಿಸಿದ್ದಾರೆ. ಅವರು ನಮ್ಮ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ.. ಇದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top