News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನ್ಯಾಯಾಂಗದ ಮೇಲೆ ನಂಬಿಕೆ ಇರಲಿ: ಅದಾನಿ ವಿವಾದದ ಬಗ್ಗೆ ಅಮಿತ್‌ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಅದಾನಿ ವಿವಾದ ಮತ್ತು ಹಿಂಡೆನ್‌ಬರ್ಗ್ ವರದಿಯಲ್ಲಿನ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸಬೇಕು ಎಂಬ ಕಾಂಗ್ರೆಸ್‌ನ ಬೇಡಿಕೆಗಳ ಬಗ್ಗೆ ಮೌನ ಮುರಿದಿದ್ದಾರೆ. ಇಂಡಿಯಾ ಟುಡೇ ಕಾನ್‌ಕ್ಲೇವ್ 2023 ರಲ್ಲಿ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಈಗಾಗಲೇ ಸಮಿತಿಯನ್ನು ರಚಿಸಿದೆ ಮತ್ತು ಜನರು ನ್ಯಾಯಾಂಗದ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದ್ದಾರೆ.

“ನಮ್ಮ ಸರ್ಕಾರಕ್ಕೆ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಸುಪ್ರೀಂಕೋರ್ಟ್ ಅದರ ತನಿಖೆಗಾಗಿ ಸಮಿತಿಯನ್ನು ರಚಿಸಿದೆ ಮತ್ತು ಜನರು ನ್ಯಾಯಾಂಗ ಪ್ರಕ್ರಿಯೆಯನ್ನು ನಂಬಬೇಕು ಎಂಬುದು ನಮ್ಮ ಮನವಿ” ಎಂದು ಅದಾನಿ ವಿರುದ್ಧದ ಆರೋಪಗಳು ಹಾಗೂ ಅದಾನಿ ಮತ್ತು ಮೋದಿ ಸರ್ಕಾರದ ಮೈತ್ರಿಯ ಆರೋಪಗಳ ಬಗ್ಗೆ ಕೇಳಿದಾಗ ಶಾ ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನಿರಂತರ ಘರ್ಷಣೆ ಮತ್ತು ಪ್ರತಿಭಟನೆಗಳಿಂದ ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸಿರುವ ಕುರಿತು ಮಾತನಾಡಿದ ಅವರು, ಪ್ರತಿಪಕ್ಷಗಳು ಈ ವಿಷಯದ ಬಗ್ಗೆ ಮಾತನಾಡಲು ಮುಂದಾದರೆ ಸಮಸ್ಯೆಯನ್ನು ಪರಿಹರಿಸಬಹುದು ಎಂದರು.

“ಎರಡೂ ಕಡೆಯವರು ಸಭಾಧ್ಯಕ್ಷರ ಮುಂದೆ ಕುಳಿತು ಚರ್ಚಿಸಲಿ. ಅವರು ಎರಡು ಹೆಜ್ಜೆ ಮುಂದೆ ಬರಬೇಕು ಮತ್ತು ನಾವು ಕೂಡ ಎರಡು ಹೆಜ್ಜೆ ಮುಂದೆ ಹೋಗುತ್ತೇವೆ. ಆಗ ಸಂಸತ್ತು ಓಡಲು ಪ್ರಾರಂಭಿಸುತ್ತದೆ” ಎಂದು ಅವರು ಹೇಳಿದ್ದಾರೆ.

“ನಮ್ಮ ಪ್ರಯತ್ನದ ಹೊರತಾಗಿಯೂ, ವಿರೋಧ ಪಕ್ಷದಿಂದ ಮಾತುಕತೆಯ ಪ್ರಸ್ತಾಪವಿಲ್ಲ, ನಾವು ಯಾರೊಂದಿಗೆ ಮಾತನಾಡಬೇಕು? ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾರೆ, ಅವರು ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯ ಇರಬೇಕು ಎಂದು ಸುಖಾಸುಮ್ಮನೆ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಲ್ಲಿ ಸಂಪೂರ್ಣ ವಾಕ್ ಸ್ವಾತಂತ್ರ್ಯವಿದೆ. ಸಂಸತ್ತಿನಲ್ಲಿ ನೀವು ಮಾತನಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ

ಶುಕ್ರವಾರ, ಲಂಡನ್‌ನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳು ಮತ್ತು ಅದಾನಿ ವಿಷಯದ ಬಗ್ಗೆ ಗದ್ದಲದ ನಡುವೆ ಸಂಸತ್ತಿನ ಉಭಯ ಸದನಗಳನ್ನು ಮಾರ್ಚ್ 20 ಕ್ಕೆ ಮುಂದೂಡಲಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top