News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

4 ಫೈಟರ್ ಜೆಟ್‌ಗಳನ್ನು ಉಕ್ರೇನ್‌ಗೆ ಕಳುಹಿಸಲು ಮುಂದಾದ ಪೋಲೆಂಡ್

ನವದೆಹಲಿ: ಮುಂದಿನ ದಿನಗಳಲ್ಲಿ ಉಕ್ರೇನ್‌ಗೆ ನಾಲ್ಕು ಸೋವಿಯತ್ ಕಾಲದ ಮಿಗ್ ಫೈಟರ್ ಜೆಟ್‌ಗಳನ್ನು ಕಳುಹಿಸುವುದಾಗಿ ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ ಭರವಸೆ ನೀಡಿದ್ದಾರೆ. ಈ ಬೆಳವಣಿಗೆ ಪೋಲೆಂಡ್ ಅನ್ನು ಉಕ್ರೇನ್‌ಗೆ ಯುದ್ಧವಿಮಾನಗಳನ್ನು ವಿತರಿಸಿದ ಮೊದಲ NATO ಸದಸ್ಯನನ್ನಾಗಿ ಮಾಡಲಿದೆ.

 ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ಯುದ್ಧವಿಮಾನಗಳಿಗೆ ಉಕ್ರೇನ್ ಮನವಿ ಮಾಡುತ್ತಲೇ ಇದೆ.
ಮಾಧ್ಯಮ ವರದಿಗಳ ಪ್ರಕಾರ, ಇತರ NATO ದೇಶಗಳು ಸೋವಿಯತ್ ಯುಗದ ವಿಮಾನಗಳನ್ನು ಉಕ್ರೇನ್‌ಗೆ ಕಳುಹಿಸಲು ಪರಿಗಣಿಸುತ್ತಿವೆ,ಈಗಾಗಲೇ  ಉಕ್ರೇನಿಯನ್ ಪೈಲಟ್‌ಗಳು ಹಾರಲು ತರಬೇತಿ ಪಡೆದಿದ್ದಾರೆ.

ಉಕ್ರೇನ್ ಈ ಹಿಂದೆ ಎಫ್-16 ನಂತಹ ಆಧುನಿಕ ಯುದ್ಧವಿಮಾನಗಳನ್ನು ಪಾಶ್ಚಿಮಾತ್ಯ ದೇಶಗಳಿಂದ ಕೇಳಿತ್ತು. ಉಕ್ರೇನ್‌ನ ವಾಯು ರಕ್ಷಣೆಗೆ  ಪೋಲೆಂಡ್ ನಿರ್ಧಾರ ಉತ್ತೇಜನ ನೀಡಲಿದೆ.  ಉಕ್ರೇನ್‌ನ ಸಂಸತ್ತಿನ ಡೆಪ್ಯೂಟಿ ಸ್ಪೀಕರ್ ಒಲೆನಾ ಕೊಂಡ್ರಾಟ್ಯೂಕ್ ಅವರು ಹೆಚ್ಚಿನ ದೇಶಗಳು ಅನುಸರಿಸುತ್ತವೆ ಎಂದು ಅವರು ಆಶಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top