News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಸ್ಕರ್‌ ಗೆದ್ದ ಭಾರತದ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼ ಸಾಕ್ಷ್ಯಚಿತ್ರ

ಲಾಸ್‌ ಏಂಜಲೀಸ್‌: ಈ ಬಾರಿ ಅಕಾಡಮಿ ಅವಾರ್ಡ್‌ನಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಆರ್‌ಆರ್‌ಆರ್‌ ಸಿನಿಮಾದ ʼನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಯಾಗಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡರೆ, ತಮಿಳಿನ ಕಿರು ಸಾಕ್ಷ್ಯಚಿತ್ರ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼ ಕೂಡ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಚಲನಚಿತ್ರ ನಿರ್ಮಾಪಕ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕ ಗುನೀತ್ ಮೊಂಗಾ ಅವರ ಈ 41 ನಿಮಿಷಗಳ ಕಿರು ಸಾಕ್ಷ್ಯಚಿತ್ರವು ರಘು, ಅನಾಥ ಮರಿ ಆನೆ ಮತ್ತು ಅವನ ಆರೈಕೆ ಮಾಡುವವರ ನಡುವಿನ ಬಂಧವನ್ನು ಅನ್ವೇಷಿಸುತ್ತದೆ.

ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ಹಾಲೌಟ್, ದಿ ಮಾರ್ಥಾ ಮಿಚೆಲ್ ಎಫೆಕ್ಟ್, ಸ್ಟ್ರೇಂಜರ್ ಅಟ್ ದಿ ಗೇಟ್ ಮುಂತಾದ ಸಾಕ್ಷ್ಯಚಿತ್ರಗಳನ್ನು ಹಿಂದಿಕ್ಕಿ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼ ಆಸ್ಕರ್‌ ಬಾಚಿಕೊಂಡಿದೆ.

ಸಾಕ್ಷ್ಯಚಿತ್ರವು ಆನೆ ಮತ್ತು ಪಾಲಕನ ನಡುವಣ ಬಾಂಧವ್ಯವನ್ನು ಮಾತ್ರವಲ್ಲದೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಆಚರಿಸುತ್ತದೆ. ಎಲಿಫೆಂಟ್ ವಿಸ್ಪರರ್ಸ್ ಡಿಸೆಂಬರ್ 2022 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top