ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ‘ಮುದ್ರಾ’(MUDRA) ಬ್ಯಾಂಕನ್ನು ಉದ್ಘಾಟನೆಗೊಳಿಸಿದರು. ಸಣ್ಣ ಉದ್ಯಮದಾರರಿಗೆ ರೂ.10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಈ ಬ್ಯಾಂಕ್ ಒದಗಿಸಲಿದೆ. ಅಲ್ಲದೇ ‘ಮೈಕ್ರೋ ಫಿನಾನ್ಸ್ ಸಂಸ್ಥೆ’ಗಳಿಗೆ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿದೆ.
ಕಿರು ಉದ್ಯಮಗಳ ಹಣಕಾಸು ವ್ಯವಹಾರಗಳಿಗೆ ನಿಯಮಾವಳಿಗಳನ್ನು ರೂಪಿಸುವುದು ಮತ್ತು ಎಂಎಫ್ಐ ಘಟಕಗಳ ನೋಂದಣಿ, ಮಾನ್ಯತೆ ಮತ್ತು ರೇಟಿಂಗ್ಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮುದ್ರಾ ಬ್ಯಾಂಕ್ ವಹಿಸಲಿದೆ.
ದೇಶದಲ್ಲಿ ಸುಮಾರು 5.77 ಕೋಟಿ ಕಿರು ಉದ್ಯಮೆಗಳಿವೆ, ಇವುಗಳಿಗೆ ಸಾಂಸ್ಥಿಕ ಹಣಕಾಸು ನೆರವು ಒದಗಿಸುವುದರಿಂದ ಸಣ್ಣ ಉದ್ಯಮೆದಾರರ ಜೀವನಮಟ್ಟ ಸುಧಾರಿಸುತ್ತದೆ. ಅಲ್ಲದೇ ಅವರನ್ನು ಜಿಡಿಪಿ ಪ್ರಗತಿಯ ಬಲಿಷ್ಠ ಪರಿಕರವನ್ನಾಗಿ ಮಾಡುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.