News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫೆಬ್ರವರಿಯಲ್ಲಿ 16% ಬೆಳವಣಿಗೆ ಕಂಡ ಆಟೋಮೊಬೈಲ್ ರಿಟೈಲ್ ಮಾರಾಟ

ನವದೆಹಲಿ: ಭಾರತದಲ್ಲಿ ಆಟೋಮೊಬೈಲ್ ಚಿಲ್ಲರೆ ಮಾರಾಟವು ಫೆಬ್ರವರಿಯಲ್ಲಿ ಶೇಕಡಾ 16 ರಷ್ಟು ಎರಡಂಕಿಯ ಬೆಳವಣಿಗೆಯನ್ನು ಕಂಡಿದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಇಂದು ತಿಳಿಸಿದೆ.

ವರ್ಷದಿಂದ ವರ್ಷದ ಆಧಾರದಲ್ಲಿ 2-ಚಕ್ರ, 3-ಚಕ್ರ, ಪ್ರಯಾಣಿಕ ವಾಹನ, ಟ್ರ್ಯಾಕ್ಟರ್ ಮತ್ತು ವಾಣಿಜ್ಯ ವಾಹನಗಳು  ಕ್ರಮವಾಗಿ ಶೇಕಡಾ 15, 81, 11, 14 ಮತ್ತು 17 ರಷ್ಟು ಬೆಳವಣಿಗೆ ಕಾಣುವ ಮೂಲಕ ಎಲ್ಲಾ ವಿಭಾಗಗಳು ಎರಡಂಕಿಯ ಬೆಳವಣಿಗೆಯನ್ನು ಕಂಡಿವೆ ಎಂದು ಇಂದು ಬಿಡುಗಡೆಯಾದ FADA ಹೇಳಿಕೆ ತಿಳಿಸಿದೆ.

ಮಾರ್ಚ್‌ನಲ್ಲಿ ಹೋಳಿ, ಯುಗಾದಿ, ಗುಡಿ ಪಾಡ್ವಾ, ನವರಾತ್ರಿ ಮುಂತಾದ ಅನೇಕ ಹಬ್ಬಗಳಿವೆ, ಆದ್ದರಿಂದ ಇದು ವಾಹನ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಹೊರತಾಗಿ, ವಾಹನಗಳ ಉತ್ತಮ ಲಭ್ಯತೆ, ಹಣಕಾಸು ವರ್ಷದ ಕೊನೆಯ ತಿಂಗಳು, ಏಪ್ರಿಲ್‌ನಿಂದ OBD ಮಾನದಂಡಗಳಲ್ಲಿನ ಬದಲಾವಣೆಯು ವಾಹನದ ಬೆಲೆಗಳನ್ನು ಹೆಚ್ಚಿಸಲಿದೆ.

ಇದರ ಹೊರತಾಗಿ  ಭಾರತದಲ್ಲಿ ದುರ್ಬಲ ಮಾನ್ಸೂನ್ ಇರಬಹುದು ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ, ಇದರಿಂದಾಗಿ ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಬೆಲೆಗಳು ಕಂಡುಬರುತ್ತವೆ. ಇದು ವಾಹನ ಮಾರಾಟಕ್ಕೆ ತಡೆಯಾಗಬಲ್ಲದು ಎಂದು ಅಂದಾಜಿಸಲಾಗಿದೆ.

ವಾಹನ ಮಾರಾಟಕ್ಕೆ ಮಾರ್ಚ್ ಉತ್ತಮವಾಗಿದ್ದರೂ, ಮಧ್ಯಮ-ಅವಧಿಯ ದೃಷ್ಟಿಕೋನದಲ್ಲಿ ಉತ್ತಮ ಮಾನ್ಸೂನ್ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸದ ಸಮಯದವರೆಗೆ ಜಾಗರೂಕರಾಗಿರುವುದಾಗಿ FADA ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top