News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಮಹೀಂದ್ರಾ ಇ-ರಿಕ್ಷಾ ಚಲಾಯಿಸಿ ಆನಂದಿಸಿದ ಬಿಲ್‌ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ ಅವರು ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು ಸಾಕಷ್ಟು ಹೊಸ ಅನುಭವಗಳನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ, ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಅಡುಗೆ ಮಾಡುವ ವೀಡಿಯೊ ಅಂತರ್ಜಾಲದಲ್ಲಿ ಸದ್ದು ಮಾಡಿತ್ತು. ಅದರ ನಂತರ ತನ್ನ ಕಾಲೇಜು ಸ್ನೇಹಿತ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಅವರನ್ನು ಭೇಟಿಯಾಗಿ ಸುದ್ದಿ ಮಾಡಿದ್ದರು. ಈಗ ಅವರು ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ರಿಕ್ಷಾವನ್ನು ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಚಾಲನೆ ಮಾಡುತ್ತಿರುವ ವೀಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಿಲ್ ಗೇಟ್ಸ್ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು “ಗೇಟ್ಸ್ ನೋಟ್ಸ್” ಎಂಬ ಒಕ್ಕಣೆಯೊಂದಿಗೆ ಪ್ರಾರಂಭವಾಗುತ್ತದೆ. ವೀಡಿಯೊದಲ್ಲಿ, ಅವರು ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಶೂನ್ಯ-ಇಂಗಾಲ ಹೊರಸೂಸುವಿಕೆಯ ಜಗತ್ತಿನತ್ತ ಪಯಣಿಸಲು ನಾವು ಕೃಷಿಯಿಂದ ಸಾರಿಗೆಯವರೆಗೆ ಎಲ್ಲವನ್ನೂ ಮಾಡುವ ವಿಧಾನವನ್ನು ಮರುಶೋಧಿಸಬೇಕಾಗಿದೆ ಎಂದು ಹೇಳಿದ್ದಾರೆ

ಈ ವೇಳೆ ಬಿಲ್ ಗೇಟ್ಸ್ ಅವರು ಭಾರತದಲ್ಲಿನ ಆವಿಷ್ಕಾರಗಳಿಂದ ಹೇಗೆ ಆಶ್ಚರ್ಯಚಕಿತನಾಗಿದ್ದೇನೆ ಎಂಬುದರ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಅವರು ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ರಿಕ್ಷಾದ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. “ಭಾರತದ ನಾವೀನ್ಯತೆಯ ಉತ್ಸಾಹವು ಸದಾ ಆಶ್ಚರ್ಯಚಕಿತಗೊಳಿಸುತ್ತದೆ. ನಾನು ಎಲೆಕ್ಟ್ರಿಕ್ ರಿಕ್ಷಾವನ್ನು ಓಡಿಸಿದ್ದೇನೆ, ಇದು 131 ಕಿಮೀ (ಸುಮಾರು 81 ಮೈಲುಗಳು) ವರೆಗೆ ಪ್ರಯಾಣಿಸುವ ಮತ್ತು 4 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸಾರಿಗೆ ಉದ್ಯಮದ ಡಿಕಾರ್ಬೊನೈಸೇಶನ್‌ಗೆ ಮಹೀಂದ್ರಾದಂತಹ ಕಂಪನಿಗಳು ಕೊಡುಗೆ ನೀಡುತ್ತಿರುವುದನ್ನು ನೋಡುವುದು ಸ್ಫೂರ್ತಿದಾಯಕವಾಗಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top