News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಸರಕು, ಸೇವೆಗಳ ರಫ್ತು ಈ ವರ್ಷ USD 750 ಶತಕೋಟಿ ತಲುಪಲಿದೆ: ಗೋಯಲ್

ನವದೆಹಲಿ: ಭಾರತದ ಸರಕು ಮತ್ತು ಸೇವೆಗಳ ರಫ್ತು ಈ ವರ್ಷ USD 750 ಶತಕೋಟಿ ಮುಟ್ಟಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿನ್ನೆ ನವದೆಹಲಿಯಲ್ಲಿ ನಡೆದ ರೈಸಿನಾ ಸಂವಾದದ 8ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2030 ರ ವೇಳೆಗೆ ಭಾರತವು ವಾರ್ಷಿಕವಾಗಿ ಒಂದು ಟ್ರಿಲಿಯನ್ ಡಾಲರ್ ಸರಕುಗಳು ಮತ್ತು ಒಂದು ಟ್ರಿಲಿಯನ್ ಡಾಲರ್ ಸೇವೆಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದರು.

ಕಳೆದ ವರ್ಷ, ಸರಕು ಮತ್ತು ಸೇವಾ ವ್ಯಾಪಾರವು USD 650 ಶತಕೋಟಿ ದಾಟಿದೆ ಎಂದು ಸಚಿವರು, ಭಾರತವು ಶೀಘ್ರದಲ್ಲೇ USD 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಮುಟ್ಟಲಿದೆ ಮತ್ತು 2027-28 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

2047 ರ ವೇಳೆಗೆ, ಭಾರತವು USD 32 ಟ್ರಿಲಿಯನ್ ಆರ್ಥಿಕತೆಯೊಂದಿಗೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಲಿದೆ, ಕಟ್ಟಕಡೆಯ ನಾಗರಿಕನಿಗೆ ಉತ್ತಮ ಗುಣಮಟ್ಟದ ಜೀವನಕ್ಕೆ ಪ್ರವೇಶವನ್ನು ಹೊಂದಿರುವ ಸಮೃದ್ಧ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು.

ಕಳೆದ ದಶಕದಲ್ಲಿ ಸರ್ಕಾರವು ಕೈಗೊಂಡ ಪರಿವರ್ತನಾ ಉಪಕ್ರಮಗಳಾದ ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಭಾರತದಲ್ಲಿ ಸುಮಾರು 35 ಮಿಲಿಯನ್ ಮನೆಗಳ ವಿದ್ಯುದೀಕರಣ, ದೃಢವಾದ ವಿದ್ಯುತ್ ಗ್ರಿಡ್ ರಚನೆ, ಎಲ್ಲರಿಗೂ ವಸತಿ, 500 ಮಿಲಿಯನ್ ಜನರಿಗೆ ಉಚಿತ ಆರೋಗ್ಯ ಸೇವೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top