ನವದೆಹಲಿ: Apple Inc. ಪಾಲುದಾರ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಭಾರತದಲ್ಲಿ ಹೊಸ ಘಟಕದಲ್ಲಿ ಸುಮಾರು 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ. ಅಮೆರಿಕಾ- ಚೀನಾ ನಡುವೆ ಉದ್ವಿಗ್ನತೆ ಹೆಚ್ಚಾದಂತೆ ಚೀನಾದಿಂದ ಉತ್ಪಾದನೆಯನ್ನು ಶಿಫ್ಟ್ ಮಾಡಲು ಕಂಪನಿ ಮುಂದಾಗುತ್ತಿದೆ ಎಂದು ಹೇಳಲಾಗಿದೆ.
ಈ ತೈವಾನ್ ಕಂಪನಿಯು ರಾಜ್ಯ ರಾಜಧಾನಿ ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪವಿರುವ 300 ಎಕರೆ ಪ್ರದೇಶದಲ್ಲಿ ಐಫೋನ್ ಭಾಗಗಳನ್ನು ತಯಾರಿಸಲು ಘಟಕವನ್ನು ನಿರ್ಮಿಸಲು ಯೋಜಿಸಿದೆ ಎಂದು ಮೂಲಗಳು ಹೇಳಿವೆ.
ಫಾಕ್ಸ್ಕಾನ್ ಈ ಘಟಕದಲ್ಲಿ ಆಪಲ್ನ ಹ್ಯಾಂಡ್ಸೆಟ್ಗಳನ್ನು ಜೋಡಿಸುವ ಮತ್ತು ತನ್ನ ಹೊಸ ಎಲೆಕ್ಟ್ರಿಕ್ ವಾಹನ ವ್ಯಾಪಾರಕ್ಕಾಗಿ ಕೆಲವು ಭಾಗಗಳನ್ನು ತಯಾರಿಸುವ ಕಾರ್ಯ ಮಾಡಲಿದೆ.
ಈ ಹೂಡಿಕೆಯು ಭಾರತದಲ್ಲಿ ಇಲ್ಲಿಯವರೆಗಿನ ಫಾಕ್ಸ್ಕಾನ್ನ ಅತಿದೊಡ್ಡ ಹೂಡಿಕೆಯಾಗಲಿದೆ. ಅಲ್ಲದೇ ಇದರಿಂದ ಚೀನಾವು ಗ್ರಾಹಕ ಎಲೆಕ್ಟ್ರಾನಿಕ್ಸ್ನ ವಿಶ್ವದ ಅತಿದೊಡ್ಡ ಉತ್ಪಾದಕ ಎಂಬ ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಆಪಲ್ ಮತ್ತು ಇತರ ಯುಎಸ್ ಬ್ರ್ಯಾಂಡ್ಗಳು ಭಾರತ ಮತ್ತು ವಿಯೆಟ್ನಾಂನಂತಹ ಪರ್ಯಾಯ ಸ್ಥಳಗಳನ್ನು ಅನ್ವೇಷಿಸಲು ತಮ್ಮ ಚೀನೀ ಮೂಲದ ಪೂರೈಕೆದಾರರ ಮೇಲೆ ಒತ್ತಡ ಹೇರುತ್ತಿಎ. ಇದು ಸಾಂಕ್ರಾಮಿಕ ಮತ್ತು ಉಕ್ರೇನ್ನಲ್ಲಿನ ಯುದ್ಧದ ಸಮಯದಲ್ಲಿ ಕುಂಠಿತೌಾದ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಪ್ರಭಾವ ಬೀರಬಲ್ಲದು ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ತಯಾರಿಸುವ ವಿಧಾನವನ್ನು ಮರುರೂಪಿಸಬಲ್ಲದು ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.