ನವದೆಹಲಿ: ದಿಬ್ರುಗಢದಲ್ಲಿ ಗಂಗಾ ವಿಲಾಸ್ ರಿವರ್ ಕ್ರೂಸ್ ತನ್ನ ಮೊದಲ ಪ್ರಯಾಣವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಂಪುಟ ಸಚಿವ ಸರ್ಬಾನಂದ ಸೋನಾವಾಲ್ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಟ್ವಿಟ್ ಮಾಡಿರುವ ಮೋದಿ, “ವಿಶೇಷ ಪ್ರಯಾಣವು ಪೂರ್ಣಗೊಂಡಿದೆ! ಭಾರತ ಮತ್ತು ಸಾಗರೋತ್ತರದಿಂದ ಹೆಚ್ಚಿನ ಪ್ರವಾಸಿಗರು ಗಂಗಾ ವಿಲಾಸ್ ವಿಹಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಸೋನಾವಾಲ್ ಅವರು ಟ್ವಿಟ್ನಲ್ಲಿ, “ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ MV ಗಂಗಾವಿಲಾಸ್ ದಿಬ್ರುಗಢದಲ್ಲಿ ತನ್ನ ಮೊದಲ ಪ್ರಯಾಣವನ್ನು ಪೂರ್ಣಗೊಳಿಸಿದ್ದು ನಮಗೆಲ್ಲರಿಗೂ ಒಂದು ಐತಿಹಾಸಿಕ ಕ್ಷಣ. 3200 ಕಿಮೀ ಮತ್ತು 27 ನದಿ ವ್ಯವಸ್ಥೆಗಳನ್ನು ಒಳಗೊಂಡ ಈ ಕ್ರೂಸ್ ಪ್ರಯಾಣ ಪವಿತ್ರ ವಾರಣಾಸಿಯಿಂದ ಆರಂಭಗೊಂಡು ಬಾಂಗ್ಲಾದೇಶದ ಮೂಲಕ ಹಾದು ಅಸ್ಸಾಂ ತಲುಸಿ ಪ್ರಯಾಣ ಬೆಳೆಸಿತು” ಎಂದಿದ್ದಾರೆ.
A special journey completes! I hope more tourists from India and overseas take part in the Ganga Vilas cruise. https://t.co/CX8FI3gRtP
— Narendra Modi (@narendramodi) March 1, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.