ನವದೆಹಲಿ: ಕೇಂದ್ರ ಸಂವಹನ ಸಚಿವಾಲಯದ ಅಡಿಯಲ್ಲಿನ ದೂರಸಂಪರ್ಕ ಇಲಾಖೆಯು 5G ಟೆಸ್ಟ್ ಬೆಡ್ ಅನ್ನು ಜನವರಿ 2024 ರವರೆಗೆ ಗುರುತಿಸಲಾದ ಸ್ಟಾರ್ಟ್-ಅಪ್ಗಳು ಮತ್ತು MSME ಗಳಿಗೆ ಉಚಿತವಾಗಿ ನೀಡಲಿದೆ. ಎಲ್ಲಾ 5G ಪಾಲುದಾರರು ಅಂದರೆ ಉದ್ಯಮ, ಅಕಾಡೆಮಿ, ಸೇವಾ ಪೂರೈಕೆದಾರರು, ಆರ್ & ಡಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಸಲಕರಣೆ ತಯಾರಕರು ಇತ್ಯಾದಿಗಳು ಈ ಸೌಲಭ್ಯವನ್ನು ಅತ್ಯಲ್ಪ ದರದಲ್ಲಿ ಬಳಸಿಕೊಳ್ಳಬಹುದು.
5ಜಿ ಟೆಸ್ಟ್ ಬೆಡ್ನ ಬಳಕೆಯನ್ನು ಉತ್ತೇಜಿಸಲು ಮತ್ತು ‘ಆತ್ಮನಿರ್ಭರ್ ಭಾರತ್’ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಳೀಯ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಅಭಿವೃದ್ಧಿಗೆ ಪೂರಕತೆಯನ್ನು ನೀಡುವ ಸಲುವಾಗಿ ಈ ನಿರ್ಧಾರವನ್ನು ಘೋಷಿಸಲಾಗಿದೆ. ಹಲವಾರು ಸ್ಟಾರ್ಟ್-ಅಪ್ಗಳು ಮತ್ತು ಕಂಪನಿಗಳು ಈಗಾಗಲೇ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪರೀಕ್ಷಿಸಲು ಟೆಸ್ಟ್ ಬೆಡ್ ಅನ್ನು ಬಳಸುತ್ತಿವೆ.
ಮಾರ್ಚ್, 2018 ರಲ್ಲಿ, ಭಾರತದ ನಿರ್ದಿಷ್ಟ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು 5G ನಿಯೋಜನೆಯಲ್ಲಿ ಮುನ್ನಡೆ ಸಾಧಿಸಲು, ದೂರಸಂಪರ್ಕ ಇಲಾಖೆಯು ಭಾರತದಲ್ಲಿ ‘ಸ್ಥಳೀಯ 5G ಟೆಸ್ಟ್ ಬೆಡ್’ ಅನ್ನು ಸ್ಥಾಪಿಸಲು ಬಹು-ಸಂಸ್ಥೆಯ ಸಹಯೋಗ ಯೋಜನೆಗೆ 224 ಕೋಟಿ ರೂ ಹಣಕಾಸಿನ ಅನುದಾನವನ್ನು ಅನುಮೋದಿಸಿತು.
ದೇಶೀಯ 5G ಟೆಸ್ಟ್ ಬೆಡ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 17, 2022 ರಂದು ದೇಶಕ್ಕೆ ಸಮರ್ಪಿಸಿದರು. ಪರೀಕ್ಷಾ ಬೆಡ್ ಪ್ರವೇಶ ಮತ್ತು ಬಳಕೆಗಾಗಿ ವೆಬ್ ಆಧಾರಿತ ಪೋರ್ಟಲ್ (https://user.cewit.org.in/5gtb/index.jsp) ಅನ್ನು ಸಹ ವಿನ್ಯಾಸಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.