ನವದೆಹಲಿ: ಭಾರತೀಯ ವಾಯುಸೇನೆಯ 145 ವಾಯು ವೀರರನ್ನು ಒಳಗೊಂಡ ತುಕಡಿಯು ಜಾಮ್ ನಗರ ವಾಯುನೆಲೆಯಿಂದ ಯುಕೆಯ ರಾಯಲ್ ಏರ್ ಫೋರ್ಸ್ನ ವಾಡಿಂಗ್ಟನ್ ಏರ್ ಫೋರ್ಸ್ ಬೇಸ್ಗೆ ಪ್ರಯಾಣ ಆರಂಭಿಸಿದೆ. ಈ ವಾಯುಸೇನಾ ತುಕಡಿಯು ಅಲ್ಲಿ ಕೋಬ್ರಾ ವಾರಿಯರ್ ವ್ಯಾಯಾಮದಲ್ಲಿ ಭಾಗವಹಿಸಲಿದೆ.
“ಎಕ್ಸರ್ಸೈಸ್ ಕೋಬ್ರಾ ವಾರಿಯರ್” ಬಹುಪಕ್ಷೀಯ ವಾಯು ವ್ಯಾಯಾಮವಾಗಿದ್ದು, ಇದರಲ್ಲಿ ಫಿನ್ಲ್ಯಾಂಡ್, ಸ್ವೀಡನ್, ದಕ್ಷಿಣ ಆಫ್ರಿಕಾ, ಅಮೆರಿಕಾ ಮತ್ತು ಸಿಂಗಾಪುರದ ವಾಯುಪಡೆಗಳು ಸಹ ಭಾಗವಹಿಸುತ್ತಿವೆ” ಎಂದು ಮೂಲಗಳು ತಿಳಿಸಿವೆ.
ಯುದ್ಧ ವಿಮಾನಗಳ ತೊಡಗಿಸಿಕೊಳ್ಳುವಿಕೆ ಮತ್ತು ವಿವಿಧ ದೇಶಗಳ ವಾಯು ಸೇನೆಯ ಉತ್ತಮ ಅಭ್ಯಾಸಗಳನ್ನು ಕಲಿಯುವ ಉದ್ದೇಶದೊಂದಿಗೆ ಈ ವ್ಯಾಯಾಮವನ್ನು ಆಯೋಜಿಸಲಾಗಿದೆ.
ಐಎಎಫ್ ಐದು ಮಿರಾಜ್ 2000 ಫೈಟರ್ಗಳು, ಎರಡು ಸಿ-17 ಗ್ಲೋಬ್ಮಾಸ್ಟರ್ III ಮತ್ತು ಐಎಲ್-78 ಮಿಡ್-ಏರ್ ಇಂಧನ ತುಂಬುವ ವಿಮಾನಗಳೊಂದಿಗೆ ಅಭ್ಯಾಸದಲ್ಲಿ ಭಾಗವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.