ನವದೆಹಲಿ: ಸಿಕಂದರಾಬಾದ್ನಲ್ಲಿರುವ ಝೋನಲ್ ರೈಲ್ವೇ ಟ್ರೈನಿಂಗ್ ಇನ್ಸ್ಟಿಟ್ಯೂಟ್ ತನ್ನ ಆವರಣದಲ್ಲಿರುವ 200 ವರ್ಷಗಳ ಹಳೆಯ ಪಾರಂಪರಿಕ ಬಾವಿಯನ್ನು ನವೀಕರಿಸುತ್ತಿದೆ. ಈ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ರೈಲ್ವೇ ಸಚಿವಾಲಯದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ, ಇದು ಶ್ಲಾಘನೀಯ ಪ್ರಯತ್ನ ಎಂದು ಬಣ್ಣಿಸಿದ್ದಾರೆ. ಸಂಸ್ಥೆಯು ನೀರಿನ ಸಂರಕ್ಷಣೆಗೆ ಅನುಕೂಲವಾಗುವಂತೆ ಬಾವಿಯ ಸುತ್ತಲೂ ಮಳೆನೀರು ಕೊಯ್ಲು ಹೊಂಡವನ್ನು ನಿರ್ಮಿಸಿದೆ.
ಸಿಕಂದರಾಬಾದ್ ಝೋನಲ್ ರೈಲ್ವೇ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಎಸ್ಸಿಆರ್) ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರಂಪರಿಕ ಬಾವಿಯ ನವೀಕರಣವನ್ನು ಕೈಗೆತ್ತಿಕೊಂಡಿದೆ. ನವೀಕರಿಸಿದ ಬಾವಿಯು ತಿಂಗಳಿಗೆ ಸುಮಾರು 5 ಲಕ್ಷ ರೂಪಾಯಿಗಳಷ್ಟು ಉಳಿತಾಯವನ್ನು ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಅಲ್ಲದೇ ಇದು ಐದು ದಶಕಗಳಿಂದ ರೈಲ್ವೇ ತರಬೇತಿ ಸಂಸ್ಥೆಯ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿದೆ.
This is a laudatory effort. https://t.co/OcOdjnCxoO
— Narendra Modi (@narendramodi) February 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.