ನವದೆಹಲಿ: ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಬಿಗಿ ಭದ್ರತೆಯ ನಡುವೆ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.
ನಾಗಾಲ್ಯಾಂಡ್ನ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ 2291 ಮತಗಟ್ಟೆಗಳನ್ನು ತೆರೆಯಲಾಗಿದೆ. 4 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 183 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 13 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬಿಜೆಪಿ ಈಗಾಗಲೇ ಒಂದು ಕ್ಷೇತ್ರವನ್ನು ಅವಿರೋಧವಾಗಿ ಗೆದ್ದಿದೆ.
2291 ಮತಗಟ್ಟೆಗಳಲ್ಲಿ 777 ನಿರ್ಣಾಯಕ ಮತ್ತು 720 ಮತಗಟ್ಟೆಗಳನ್ನು ದುರ್ಬಲ ಎಂದು ವರ್ಗೀಕರಿಸಲಾಗಿದೆ.
ಚುನಾವಣಾ ಆಯೋಗವು ಜಿಲ್ಲೆಯಾದ್ಯಂತ 387 ಎಲ್ಲಾ ಮಹಿಳಾ ಮತಗಟ್ಟೆಗಳು ಹಾಗೂ 38 ಮಾದರಿ, 7 ಸಂಪೂರ್ಣ ಯುವಕರು ಮತ್ತು 3 ಸಂಪೂರ್ಣ ದಿವ್ಯಾಂಗರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಶಾಂತಿಯುತ ಮತದಾನಕ್ಕಾಗಿ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ, ಈಗಾಗಲೇ ಜಿಲ್ಲೆಗಳಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ಇದು ಇಂದು ಸಂಜೆಯವರೆಗೂ ಜಾರಿಯಲ್ಲಿರುತ್ತದೆ.
ರಾಜ್ಯಕ್ಕೆ ತೊಂದರೆ ನೀಡುವವರು ಪ್ರವೇಶಿಸುವುದನ್ನು ತಡೆಯಲು ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ ಗಡಿಗಳನ್ನು ಸಹ ಮುಚ್ಚಲಾಗಿದೆ. ಆದರೆ, ರಾಜ್ಯಕ್ಕೆ ಅಗತ್ಯ ಸರಕುಗಳ / ತುರ್ತು ಸೇವೆಗಳ ಚಲನೆಗೆ ವಿನಾಯಿತಿ ನೀಡಲಾಗಿದೆ.
ಮೇಘಾಲಯದಲ್ಲೂ ಮತದಾನ ಭರದಿಂದ ಸಾಗುತ್ತಿದೆ. 60 ಸ್ಥಾನಗಳ ರಾಜ್ಯ ವಿಧಾನಸಭೆಯಲ್ಲಿ 59 ಕ್ಷೇತ್ರಗಳಲ್ಲಿ ಒಟ್ಟು 369 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಯುಡಿಪಿ ಅಭ್ಯರ್ಥಿಯ ನಿಧನದಿಂದಾಗಿ ಸೊಹಿಯಾಂಗ್ ಕ್ಷೇತ್ರದಲ್ಲಿ ಚುನಾವಣೆಯನ್ನು ಸ್ಥಗಿತಗೊಳಿಸಲಾಗಿದೆ. 21 ಲಕ್ಷ 40 ಸಾವಿರಕ್ಕೂ ಹೆಚ್ಚು ಮತದಾರರು 3,419 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಚುನಾವಣೆಗೆ 4 ರಾಷ್ಟ್ರೀಯ ಪಕ್ಷಗಳು ಸೇರಿದಂತೆ 14 ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮಾರ್ಚ್ 2 ರಂದು ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.
Urging the people of Meghalaya and Nagaland, particularly the young and first time voters, to vote in record numbers today.
— Narendra Modi (@narendramodi) February 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.